Tuesday, January 13, 2026
Tuesday, January 13, 2026
spot_img

ಭಾರತಕ್ಕೆ ‘ವರ್ಲ್ಡ್ ಕ್ಲಾಸ್’ ಸೈಕ್ಲಿಂಗ್ ಎಂಟ್ರಿ: ಪುಣೆ ಗ್ರ್ಯಾಂಡ್ ಟೂರ್ 2026ಗೆ ಒಲಂಪಿಕ್ ಅರ್ಹತಾ ರೇಸ್ ಆತಿಥ್ಯ ಹಕ್ಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸೈಕ್ಲಿಂಗ್ ಕ್ರೀಡೆಯಲ್ಲಿ ಮಹತ್ವದ ಐತಿಹಾಸಿಕ ತಿರುವು ದೊರೆತಿದ್ದು, ದೇಶವು ಪ್ರತಿಷ್ಠಿತ ಪ್ರೋ ಸ್ಟೇಜ್ ಎಲಿಟ್ ರೇಸ್ ಫಾರ್ ಮೆನ್ ಅಂತರರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ಮತ್ತು ಒಲಿಂಪಿಕ್ ಅರ್ಹತಾ ಅಂಕಗಳ ರೇಸ್ ಆಯೋಜಿಸುವ ಹಕ್ಕನ್ನು ಯಶಸ್ವಿಯಾಗಿ ಪಡೆದುಕೊಂಡಿದೆ.

ಈ ಮಹತ್ವದ ಸ್ಪರ್ಧೆಯು ‘ಪುಣೆ ಗ್ರ್ಯಾಂಡ್ ಟೂರ್ 2026’ ಎಂಬ ಹೆಸರಿನಲ್ಲಿ ನಡೆಯಲಿದ್ದು, ಇದು ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೊದಲ ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ ಮಾನ್ಯತೆ ಪಡೆದ Class 2.2 ವರ್ಗದ ಬಹು ಹಂತದ ರಸ್ತೆ ಸೈಕ್ಲಿಂಗ್ ಸ್ಪರ್ಧೆಯಾಗಿದೆ.

UCI ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಸೇರ್ಪಡೆಯಾಗಿರುವ ಪುಣೆ ಗ್ರ್ಯಾಂಡ್ ಟೂರ್ 2026, ವಿಶ್ವಮಟ್ಟದ ಸೈಕ್ಲಿಂಗ್ ಜಗತ್ತಿನಲ್ಲಿ ಭಾರತಕ್ಕೆ ಬಾಗಿಲು ತೆರೆಯಲಿದೆ. ಈ ಸ್ಪರ್ಧೆಯು ಕ್ರೀಡಾಪಟುಗಳ ಶ್ರಮ, ಉತ್ಸಾಹ ಮತ್ತು ಸ್ಪರ್ಧಾತ್ಮಕ ಚೈತನ್ಯವನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ.

ಟೂರ್ನಿಯ ವಿವರಗಳು:

ಅವಧಿ: ಜನವರಿ 19 ರಿಂದ 23, 2026

ಹಂತಗಳು: 4 ಹಂತಗಳು

ಒಟ್ಟು ದೂರ: 437 ಕಿ.ಮೀ

ಅಧಿಕಾರಿಗಳ ಪ್ರತಿಕ್ರಿಯೆಗಳು:

ಪುಣೆ ಜಿಲ್ಲಾಧಿಕಾರಿ ಮತ್ತು ಆಡಳಿತಾಧಿಕಾರಿ ಜಿತೇಂದ್ರ ದುಡಿ (IAS): “ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣ. ಪುಣೆ ಗ್ರ್ಯಾಂಡ್ ಟೂರ್ 2026 ಅನ್ನು ವಾರ್ಷಿಕ ಕಾರ್ಯಕ್ರಮವಾಗಿ ಮುಂದುವರಿಸುವುದು ನಮ್ಮ ಗುರಿ.”

ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಪಂಕಜ್ ಸಿಂಗ್: “CFI ದೇಶದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಬದ್ಧವಾಗಿದೆ. ಈ ಟೂರ್ನಿಯು ನಮ್ಮ ಪಯಣದಲ್ಲಿ ಹೆಮ್ಮೆಯ ಮೈಲಿಗಲ್ಲು. ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ನಡೆಯುವ ಈ UCI Class 2.2 ಸ್ಪರ್ಧೆಯು ಭಾರತೀಯ ಕ್ರೀಡಾಪಟುಗಳಿಗೆ ಪ್ರೊಫೆಷನಲ್ ರೈಡರ್‌ಗಳೊಂದಿಗೆ ವಿಶ್ವಮಟ್ಟದ ಸ್ಪರ್ಧಾತ್ಮಕ ಅನುಭವ ನೀಡಲಿದೆ.”

ಯೂನಿಯನ್ ಸೈಕ್ಲಿಸ್ಟ್ ಇಂಟರ್ನ್ಯಾಷನಲ್ ಅಧ್ಯಕ್ಷ ಡೇವಿಡ್ ಲಾಪ್ಪಾರ್ಟಿಯೆಂಟ್: “ಪುಣೆ ಗ್ರ್ಯಾಂಡ್ ಟೂರ್ ಅನ್ನು UCI ಕ್ಯಾಲೆಂಡರ್‌ಗೆ ಸೇರಿಸಲು ನಮಗೆ ಸಂತೋಷವಿದೆ. ಇದನ್ನು UCI 2.2 ರೇಸ್ ಎಂದು ಗುರುತಿಸುವುದು ಭಾರತೀಯ ಸೈಕ್ಲಿಂಗ್‌ಗೆ ದೊಡ್ಡ ಮೈಲಿಗಲ್ಲು. ಇದು ವಿಶ್ವಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರದೇಶದ ಬದ್ಧತೆಯನ್ನು ತೋರಿಸುತ್ತದೆ.”

ಪುಣೆ ಜಿಲ್ಲಾ ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರದ ಸಹಯೋಗದಲ್ಲಿ ಈ ಟೂರ್ನಿ ಆಯೋಜನೆಯಾಗುತ್ತಿದ್ದು, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಹಭಾಗಿತ್ವವನ್ನು ನೀಡಲಿದೆ.

Most Read

error: Content is protected !!