Wednesday, December 10, 2025

ಎಂಟನೇ ದಿನಕ್ಕೆ ಕಾಲಿಟ್ಟ ಇಂಡಿಗೋ ಬಿಕ್ಕಟ್ಟು: ಬೆಂಗಳೂರು, ಹೈದರಾಬಾದ್ ನಿಂದ 180 ವಿಮಾನ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಕ್ಕಟ್ಟಿನಿಂದ ಬಳಲುತ್ತಿರುವ ಇಂಡಿಗೋ ವಿಮಾನಯಾನ ಸಂಸ್ಥೆ ಸತತ ಎಂಟನೇ ದಿನವೂ ಅಡಚಣೆ ಮುಂದುವರಿದಿದ್ದು, ಮಂಗಳವಾರ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಸುಮಾರು 180 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಹೈದರಾಬಾದ್‌ ನಲ್ಲಿ ಇಂಡಿಗೋನ 58 ವಿಮಾನಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳಲ್ಲಿ 14 ಆಗಮನಗಳು ಮತ್ತು 44 ನಿರ್ಗಮನ ವಿಮಾನಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರದ್ದತಿಯ ಸಂಖ್ಯೆ 121 ಆಗಿದ್ದು, ಅದರಲ್ಲಿ 58 ಆಗಮನಗಳು ಮತ್ತು 63 ನಿರ್ಗಮನ ವಿಮಾನಗಳು ಸೇರಿವೆ.

ಈಗಿನ ಬಿಕ್ಕಟ್ಟಿನಿಂದಾಗಿ ಇಂಡಿಗೋಗೆ ವೇಳಾಪಟ್ಟಿಯಲ್ಲಿ ಹಲವಾರು ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲು ತೊಂದರೆಯಾಗಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, ಸರ್ಕಾರವು ವಿಮಾನಯಾನ ಸಂಸ್ಥೆಯ ಸ್ಲಾಟ್ ಹಂಚಿಕೆಯನ್ನು ಕಡಿತಗೊಳಿಸಲಿದೆ ಎಂದು ಹೇಳಿದ್ದಾರೆ.

error: Content is protected !!