January21, 2026
Wednesday, January 21, 2026
spot_img

ವಿದ್ಯಾರ್ಥಿಗಳಿಗೂ ತಟ್ಟಿತು ಇಂಡಿಗೋ ಬಿಸಿ: ಪಿಜಿ ನೀಟ್​ ಪ್ರವೇಶ ಪ್ರಕ್ರಿಯೆ ಮುಂದೂಡಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿನ ವಿಮಾನ ಸಂಚಾರ ವ್ಯವಸ್ಥೆ ಕಳೆದ ಹಲವು ದಿನಗಳಿಂದ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದು, ಅದರ ಪರಿಣಾಮ ಈಗ ಪ್ರಯಾಣಿಕರ ದೈನಂದಿನ ಜೀವನವನ್ನೇ ಸಂಕಷ್ಟಕ್ಕೀಡುಮಾಡಿದೆ. ವಿಶೇಷವಾಗಿ ಇಂಡಿಗೋ ವಿಮಾನಗಳ ನಿರಂತರ ರದ್ದತಿ ಮತ್ತು ವಿಳಂಬ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮಾತ್ರವಲ್ಲದೆ ವಿದೇಶಿ ಪ್ರಯಾಣಿಕರೂ ಸಹ ಈ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಐದು ದಿನಗಳಿಂದ ಮುಂದುವರಿದಿರುವ ಈ ವ್ಯತ್ಯಯದಿಂದಾಗಿ ಹಲವು ಪ್ರಯಾಣ ಯೋಜನೆಗಳು ಸಂಪೂರ್ಣವಾಗಿ ವಿಫಲಗೊಂಡಿವೆ. ಕೆಲವು ಕುಟುಂಬಗಳು ಪ್ರಯಾಣ ಸಾಧ್ಯವಾಗದೇ ಆನ್‌ಲೈನ್‌ ಮೂಲಕವೇ ಆರತಕ್ಷತೆ ನಡೆಸಿದ್ದಾರೆ. ಮತ್ತೊಂದೆಡೆ, ಬೆಂಗಳೂರು–ಮುಂಬೈ ಮಾರ್ಗದಲ್ಲಿ ಖಾಸಗಿ ಬಸ್ ಸಂಸ್ಥೆಗಳು ಟಿಕೆಟ್ ದರವನ್ನು ಅತಿಯಾಗಿ ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿವೆ. ಈ ಪರಿಸ್ಥಿತಿಯ ಪರಿಣಾಮ ಪಿಜಿ ನೀಟ್ ಪ್ರವೇಶ ಪ್ರಕ್ರಿಯೆಯ ಮೇಲೂ ಬಿದ್ದಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಾಖಲೆ ಸಲ್ಲಿಕೆ ಮತ್ತು ಶುಲ್ಕ ಪಾವತಿ ದಿನಾಂಕವನ್ನು ಡಿಸೆಂಬರ್ 8ರವರೆಗೆ ವಿಸ್ತರಿಸಿದೆ.

ಇಂಡಿಗೋ ಅವ್ಯವಸ್ಥೆಯ ಬಿಸಿ ವಿದೇಶಿಗರಿಗೂ ತಟ್ಟಿದ್ದು, ಜರ್ಮನಿಯಿಂದ ಬಂದ ಪ್ರಯಾಣಿಕರು ಕೊನೆಯ ಕ್ಷಣದ ವಿಮಾನ ರದ್ದತಿಯಿಂದ ಪರದಾಡಿದ್ದಾರೆ.

Must Read