Friday, December 5, 2025

ಮಂಗಳೂರಿಗೂ ತಟ್ಟಿದ ‘ಇಂಡಿಗೋ’ ಬಿಸಿ: 17 ವಿಮಾನಗಳ ಹಾರಾಟ ರದ್ದು!

ಹೊಸ ದಿಗಂತ ವರದಿ, ಮಂಗಳೂರು:

ದೇಶಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ಉಂಟಾದ ವ್ಯತ್ಯಯ ಮಂಗಳೂರಿಗೂ ತಟ್ಟಿದೆ. ಗುರುವಾರ ಒಟ್ಟು 10 ವಿಮಾನಗಳ ಸಂಚಾರ ರದ್ದಾಗಿದ್ದರೆ, ಶುಕ್ರವಾರ 17 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

ಮಂಗಳೂರಿನಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸಬೇಕಾದ 8 ವಿಮಾನಗಳು, ಮಂಗಳೂರಿಗೆ ಆಗಮಿಸಬೇಕಾದ 9 ವಿಮಾನಗಳ ಸಂಚಾರ ರದ್ದುಗೊಂಡಿತ್ತು. ಕೇವಲ 4 ವಿಮಾನಗಳು ಮಾತ್ರ ಸಂಚಾರ ನಡೆಸಿವೆ. 3 ವಿಮಾನಗಳು ಅರ್ಧ ಗಂಟೆಗೂ ಅಧಿಕ ವಿಳಂಬದ ಬಳಿಕ ಸಂಚಾರ ಕೈಗೊಂಡಿವೆ.

error: Content is protected !!