January 30, 2026
Friday, January 30, 2026
spot_img

PARENTING | ʼಸ್ಕೂಲಿಗೆ ಲೇಟಾಯ್ತು ಎದ್ದೇಳೋʼ ಅಂತ ಕೂಗೋ ಬದಲು ಮಕ್ಕಳನ್ನು ಈ ರೀತಿ ಎಬ್ಬಿಸಿ

ಈ ಚಳಿ ವೆದರ್‌ನಲ್ಲಿ ಮಕ್ಕಳನ್ನು ಎಬ್ಬಿಸಿ, ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ, ಸ್ಕೂಲಿಗೆ ಕಳಿಸೋದು ಪೋಷಕರ ದೊಡ್ಡ ತಲೆನೋವು. ದೊಡ್ಡವರೇ ಹೇಳಿದ ಟೈಮ್‌ಗೆ ರೆಡಿಯಾಗೋಕೆ ಕಷ್ಟವಾಗುತ್ತೆ, ಇನ್ನು ಮಕ್ಕಳು ಅವರದ್ದೇ ಕ್ಲಾಕ್‌ನಲ್ಲಿ ನಡೆದುಕೊಳ್ಳುತ್ತಾರೆ.

ದಿನಾ ಲೇಟಾಗಿ ಎದ್ದೇಳ್ತೀಯ ಅಂತ ಜೋರು ಮಾಡಿ ಎಬ್ಬಿಸಬೇಡಿ. ಅದು ಅವರ ದಿನವನ್ನೇ ಹಾಳು ಮಾಡುತ್ತದೆ. ಅಥವಾ ಬೈಸಿಕೊಳ್ಳೋದು ನಾರ್ಮಲ್‌ ಎಂದುಕೊಳ್ತಾರೆ. ಬೈದು ಎಬ್ಬಿಸೋಕೂ ಐದು ನಿಮಿಷ, ಹಾಗೇ ಪ್ರೀತಿಯಿಂದ ಎಬ್ಬಿಸೋಕೆ ಐದು ನಿಮಿಷ ಸಾಕು. ಆದರೆ ಒತ್ತಡದಿಂದ ಎಲ್ಲರೂ ಮೊದಲನೆ ದಾರಿಯನ್ನೇ ಆಯ್ಕೆ ಮಾಡಿಕೊಳ್ತಾರೆ.

ಏನು ಮಾಡಬಹುದು?
ರಾತ್ರಿ ಲೇಟಾಗಿ ಮಲಗಿಸಿ ಬೆಳಗ್ಗೆ ಬೇಗ ಏಳು ಅಂತ ಹಠ ಮಾಡಿದರೆ ಹೇಗೆ ಆದೀತು? ಕನ್ಸಿಸ್ಟೆಂಟ್‌ ರೊಟೀನ್‌ ಸೆಟ್‌ ಮಾಡಿ. ರಾತ್ರಿ ಒಂಬತ್ತಕ್ಕೆ ಬೆಡ್‌ನಲ್ಲಿ ಮಕ್ಕಳು ಇರಬೇಕು. ಅರ್ಧ ಗಂಟೆಯಲ್ಲಿ ನಿದ್ದೆಗೆ ಜಾರಬೇಕು. ಅವರ ಒಳಗಿನ ಗಡಿಯಾರ ಸೆಟ್‌ ಆಗಬೇಕು. ವೀಕೆಂಡ್‌ನಲ್ಲೂ ಇದೇ ರೊಟೀನ್‌ ಇರಲಿ.

ಇದನ್ನೂ ಓದಿ: ಭಾರತದಲ್ಲಿ ಅದ್ಭುತ ಅರಮನೆಗಳಿರೋದು ಇಲ್ಲೇ ನೋಡಿ: ಏನ್ ಅಂದ-ಏನ್ ಚಂದ…ವ್ಹಾ!

ಕಿರುಚಿ, ಕೂಗಾಡಿ ಎಬ್ಬಿಸೋ ಬದಲು, ನಿಧಾನಕ್ಕೆ ಕರ್ಟನ್‌ ತೆಗೆದು ನ್ಯಾಚುರಲ್‌ ಲೈಟ್‌ ಒಳಗೆ ಬರುವಂತೆ ಮಾಡಿ. ಮನೆಯಲ್ಲಿ ಸಾಫ್ಟ್‌ ಮ್ಯೂಸಿಕ್‌ ಇರಲಿ. ಮಕ್ಕಳು ಏಳು ಗಂಟೆಗೆ ಎದ್ದೇಳಬೇಕು ಎನ್ನುವುದು ನಿಮ್ಮ ಲೆಕ್ಕಾಚಾರ ಆಗಿದ್ದರೆ, ಆರು ಮುಕ್ಕಾಲಿಗೆ ಈ ಕೆಲಸ ಮಾಡಿ. ದಿನ ಶುರುವಾಗಿದೆ ಎಂದು ತಿಳಿಸಿ, ಮುದ್ದು ಮಾಡಿ ಎಬ್ಬಿಸಿ. ಪ್ಲೀಸ್‌ ಎದ್ದೇಳು ಸ್ಕೂಲಿಗೆ ಲೇಟಾದ್ರೆ ಬೈತಾರೆ ಎಂದು ಹೇಳಿ.

ಮನೆಯಲ್ಲಿ ಅಮ್ಮ ಅಥವಾ ಅಮ್ಮ ಅಡುಗೆ ಮಾಡುವ ಸಣ್ಣ ಪುಟ್ಟ ಸದ್ದು, ಘಮ ರೂಮ್‌ ಒಳಗೂ ಬರಲಿ. ದಿನ ಆರಂಭವಾಗಿದೆ ಎಂದು ಅವರಿಗೆ ತಿಳಿಸುವ ಸಣ್ಣ ಸದ್ದು, ಘಮ ಇರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !