January19, 2026
Monday, January 19, 2026
spot_img

Interesting Facts | ಮೇಕೆ ಕೂಡ ಒಂದು ದೇಶದ ರಾಷ್ಟ್ರೀಯ ಪ್ರಾಣಿ ಅನ್ನೋದು ನಿಮಗೆ ಗೊತ್ತಿದ್ಯಾ?

ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಎಂಬುದು ಎಲ್ಲರಿಗೂ ಪರಿಚಿತ. ಆದರೆ ನಮ್ಮ ನೆರೆಯ ದೇಶ ಪಾಕಿಸ್ತಾನದ ರಾಷ್ಟ್ರೀಯ ಪ್ರಾಣಿ ಮೇಕೆ ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಇದು ಸಾಮಾನ್ಯ ಮೇಕೆ ಅಲ್ಲ, ಹಿಮಾಲಯ ಮತ್ತು ಅದರ ಸುತ್ತಲಿನ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಮಾರ್ಖೋರ್ ಮೇಕೆ. ಇದರ ವಿಶೇಷತೆ ಮತ್ತು ಶಕ್ತಿಯ ಕಾರಣದಿಂದಲೇ ಪಾಕಿಸ್ತಾನದಲ್ಲಿ ಇದನ್ನು ಗೌರವದ ಸ್ಥಾನಕ್ಕೆ ಏರಿಸಲಾಗಿದೆ.

ಮಾರ್ಖೋರ್ ಎಂಬ ಹೆಸರು ಪಾಷ್ಟೋ ಭಾಷೆಯಿಂದ ಬಂದಿದ್ದು, “ಹಾವು-ಭಕ್ಷಕ” ಎಂಬ ಅರ್ಥ ಹೊಂದಿದೆ. ಜನಪ್ರಚಲಿತ ನಂಬಿಕೆಯ ಪ್ರಕಾರ, ಮಾರ್ಖೋರ್ ತನ್ನ ಬಲಿಷ್ಠ ಕೊಂಬುಗಳನ್ನು ಬಳಸಿ ಹಾವುಗಳನ್ನು ಕೊಂದು ತಿನ್ನುತ್ತದೆ. ಅದರ ಬಾಯಿಯಿಂದ ಬರುವ ನೊರೆ ಹಾವು ಕಡಿತದ ವಿಷವನ್ನು ಹೀರಿಕೊಳ್ಳಬಲ್ಲದು ಎನ್ನುವ ನಂಬಿಕೆ ಸಹ ಇದೆ. ಹೀಗಾಗಿ ಈ ಮೇಕೆಯನ್ನು ಹಾವುಗಳ ದೊಡ್ಡ ಶತ್ರು ಎಂದು ಪರಿಗಣಿಸಲಾಗುತ್ತದೆ.

ಮಾರ್ಖೋರ್ ತನ್ನ ವಿಶಿಷ್ಟ ದೇಹದ ರಚನೆಯಿಂದ ಗುರುತಿಸಬಹುದು. ಸುಮಾರು 6 ಅಡಿ ಎತ್ತರ ಹಾಗೂ 240 ಪೌಂಡ್ ತೂಕದ ಈ ಪ್ರಾಣಿ, ಉದ್ದವಾದ ಬಾಗಿದ ಕೊಂಬುಗಳು ಮತ್ತು ದಪ್ಪ ಗಡ್ಡದಿಂದಲೇ ಗಮನ ಸೆಳೆಯುತ್ತದೆ. ಇದು ಭಾರತದ ಉತ್ತರ ಭಾಗ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಟರ್ಕಿಯ ಪರ್ವತ ಪ್ರದೇಶಗಳಲ್ಲಿ 2,000ರಿಂದ 11,800 ಅಡಿ ಎತ್ತರದ ವರೆಗೆ ವಾಸಿಸುತ್ತದೆ.

ಆದರೆ ವಿಷಾದನೀಯ ಸಂಗತಿ ಏನೆಂದರೆ, ಮಾರ್ಖೋರ್ ಈಗ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಸೇರಿದೆ. ಇದರ ಸಂರಕ್ಷಣೆಗೆ ಹಲವು ಪ್ರಯತ್ನಗಳು ನಡೆಯುತ್ತಿವೆ. ಪಾಕಿಸ್ತಾನದ ರಾಷ್ಟ್ರೀಯ ಪ್ರಾಣಿ ಆಗಿರುವ ಮಾರ್ಖೋರ್ ಕೇವಲ ಶಕ್ತಿ ಮತ್ತು ಧೈರ್ಯದ ಸಂಕೇತವಲ್ಲ, ಪರಿಸರ ಸಮತೋಲನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

Must Read

error: Content is protected !!