ಮಕ್ಕಳು ಹುಟ್ಟಿದ ಕ್ಷಣದಿಂದಲೇ ತಮ್ಮ ತಂದೆ-ತಾಯಿಯ ಪ್ರತಿಬಿಂಬವಾಗಿರುತ್ತಾರೆ. ಆದರೆ ಅಧ್ಯಯನಗಳ ಪ್ರಕಾರ, ವಿಶೇಷವಾಗಿ ತಂದೆಯಿಂದ ಮಕ್ಕಳಿಗೆ ಹೆಚ್ಚು ಅನುವಂಶಿಕ ಗುಣಲಕ್ಷಣಗಳು ಬರುತ್ತವೆ ಎನ್ನಲಾಗಿದೆ. ತಂದೆಯ ಸ್ವಭಾವ, ನಡತೆ, ಆರೋಗ್ಯ, ದೈಹಿಕ ಲಕ್ಷಣಗಳು ಸೇರಿದಂತೆ ಹಲವಾರು ಅಂಶಗಳು ಮಕ್ಕಳ ಜೀವನದಲ್ಲಿ ನೇರವಾಗಿ ಪ್ರತಿಫಲಿಸುತ್ತವೆ. ಇಲ್ಲಿದೆ ಅಂತಹ 7 ಪ್ರಮುಖ ಗುಣಲಕ್ಷಣಗಳು, ಅವು ಸಾಮಾನ್ಯವಾಗಿ ತಂದೆಯಿಂದ ಮಕ್ಕಳಿಗೆ ವರ್ಗಾಗುತ್ತವೆ.
ಮುಖದ ಹೊಳಪು: ಮಗುವಿನ ಮುಖ ತಾಯಿಯನ್ನು ಹೋಲಬಹುದು, ಆದರೆ ಮುಖದ ಹೊಳಪು ಮತ್ತು ಚರ್ಮದ ಬಣ್ಣ ತಂದೆಯನ್ನೇ ಹೋಲುವ ಸಾಧ್ಯತೆ ಹೆಚ್ಚಿರುತ್ತದೆ.
ಪಾದದ ಗಾತ್ರ: ಮಕ್ಕಳ ಪಾದದ ಉದ್ದ ಹಾಗೂ ಆಕಾರ ಬಹುತೇಕ ತಂದೆಯ ಮಾದರಿಯಲ್ಲೇ ಬೆಳೆಯುತ್ತದೆ.

ಕಣ್ಣಿನ ಬಣ್ಣ: ಮಕ್ಕಳ ಕಣ್ಣಿನ ಬಣ್ಣ ಸಾಮಾನ್ಯವಾಗಿ ತಂದೆಯ ಡಿಎನ್‌ಎ ಪ್ರಭಾವದಿಂದ ತೀರ್ಮಾನವಾಗುತ್ತದೆ.
ಗಣಿತ ಜ್ಞಾನ: ಗಣಿತ ಕೌಶಲ್ಯ ತಂದೆಯಿಂದ ಮಕ್ಕಳಿಗೆ ಹೆಚ್ಚು ವರ್ಗಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಹಲ್ಲಿನ ಆರೋಗ್ಯ: ಹಲ್ಲಿನ ಬಲ ಮತ್ತು ಆಕಾರ ಬಹುತೇಕ ತಂದೆಯಂತೆಯೇ ಇರುತ್ತದೆ.
ಎತ್ತರ: ಮಕ್ಕಳ ಎತ್ತರ ಹೆಚ್ಚಾಗಿ ತಂದೆಯ ಎತ್ತರದ ಪ್ರಭಾವದಿಂದಲೇ ನಿರ್ಧಾರವಾಗುತ್ತದೆ.

ಮುಖ ಲಕ್ಷಣಗಳು: ಮೂಗು, ದವಡೆ, ಮುಖದ ಹಾವಭಾವ ಸೇರಿದಂತೆ ಹೆಚ್ಚಿನ ಮುಖ ಲಕ್ಷಣಗಳು ತಂದೆಯಿಂದ ಮಕ್ಕಳಿಗೆ ಬರುತ್ತವೆ.
ಮಕ್ಕಳಿಗೆ ತಾಯಿಯ ಪ್ರಭಾವ ಇದ್ದೇ ಇರುತ್ತದೆ, ಆದರೆ ತಂದೆಯ ಡಿಎನ್‌ಎಯಿಂದ ಬರುವ ಲಕ್ಷಣಗಳು ಹೆಚ್ಚು ಗಾಢವಾಗಿರುತ್ತವೆ. ಮುಖದ ಆಕಾರದಿಂದ ಹಿಡಿದು ಎತ್ತರ, ಹಲ್ಲು, ಕಣ್ಣಿನ ಬಣ್ಣದವರೆಗೆ ಹಲವು ಗುಣಗಳು ತಂದೆಯನ್ನೇ ಹೋಲುತ್ತವೆ. ಹೀಗಾಗಿ ತಂದೆಯ ಆರೋಗ್ಯ ಹಾಗೂ ಸ್ವಭಾವ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)