Sunday, November 9, 2025

ಗೋವಾದಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರಜನಿಕಾಂತ್‌ಗೆ IFFI ಗೌರವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI 2025) ನಡೆಯುತ್ತಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿಯ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI)ದ ಅತ್ಯಂತ ಮಹತ್ವದ ವೇದಿಕೆಯಾಗಲಿದೆ. ರಜನಿಕಾಂತ್ ತಮ್ಮ ಸಾಧನೆಗಾಗಿ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಇನ್ನು ಕಮಲ್ ಹಾಸನ್ ನಿರ್ಮಾಣದ ನಟ ಶಿವಕಾರ್ತಿಕೇಯನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಚಿತ್ರವು ಉತ್ಸವದ ಅತ್ಯುನ್ನತ ಪ್ರತಿಷ್ಠಿತ ‘ಗೋಲ್ಡನ್ ಪೀಕಾಕ್ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡಿದೆ. ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡ ಕಮಲ್, “ಭಾರತದ ಆತ್ಮವನ್ನು ಕಲಕುವ ಅಮರ ಮೇಜರ್ ಮುಕುಂದ್ ವರದರಾಜನ್ ಅವರ ಕಥೆಯನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತದೆ, ಅದು ಈಗ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ” ಎಂದು ಬರೆದಿದ್ದಾರೆ.

ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ‘ಥುದರುಮ್’ ಚಿತ್ರವು 56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ ( IFFI ) ದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ‘ಇಂಡಿಯನ್ ಪನೋರಮಾ’ ವಿಭಾಗದಲ್ಲಿ ಆಯ್ಕೆಯಾಗಿದೆ. ಟೊವಿನೊ ಥಾಮಸ್ ಅಭಿನಯದ ‘ARM’ ಚಿತ್ರವೂ ‘ಬೆಸ್ಟ್ ಡೆಬ್ಯೂಟ್ ಡೈರೆಕ್ಟರ್ ಕಾಂಪಿಟೇಷನ್’ ವಿಭಾಗದಲ್ಲಿ ಆಯ್ಕೆಯಾಗಿದೆ.

IFFI 2025 81 ದೇಶಗಳಿಂದ 240 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಿದೆ. ಇದರಲ್ಲಿ 13 ವರ್ಡ್‌ ಪ್ರೀಮಿಯರ್ಸ್‌, 4 ಅಂತಾರಾಷ್ಟ್ರೀಯ ಪ್ರಥಮ ಪ್ರದರ್ಶನಗಳು ಮತ್ತು 46 ಏಷ್ಯನ್ ಪ್ರಥಮ ಪ್ರದರ್ಶನಗಳು ಸೇರಿವೆ. 127 ದೇಶಗಳಿಂದ ದಾಖಲೆಯ 2,314 ಚಲನಚಿತ್ರ ಸಲ್ಲಿಕೆಗಳು ಬಂದಿವೆ ಎಂದು ಆಯೋಜಕರು ತಿಳಿಸಿದ್ದಾರೆ.

error: Content is protected !!