January15, 2026
Thursday, January 15, 2026
spot_img

International Jaguar Day | ಅಳಿವಿನಂಚಿನತ್ತ ಸಾಗುತ್ತಿರೋ ಜಾಗ್ವಾರ್ ಉಳಿವು ನಮ್ಮೆಲ್ಲರ ಹೊಣೆ

ದಟ್ಟ ಕಾಡಿನ ಆಳದಲ್ಲಿ ನಿಶ್ಶಬ್ದವಾಗಿ ಸಾಗುವ, ಭಯಕ್ಕೂ ಸೌಂದರ್ಯಕ್ಕೂ ಒಂದೇ ಸಮಯದಲ್ಲಿ ಪ್ರತಿನಿಧಿಯಾಗಿ ಕಾಣುವ ಪ್ರಾಣಿ ಜಾಗ್ವಾರ್. ಅದರ ಒಂದು ನೋಟವೇ ಭಯ ಹುಟ್ಟಿಸುತ್ತೆ. ಇಂತಹ ಅಪರೂಪದ ಜೀವಿಯ ಸಂರಕ್ಷಣೆಗೆ ಜಗತ್ತಿನ ಗಮನ ಸೆಳೆಯಲು ಪ್ರತಿವರ್ಷ ನವೆಂಬರ್ 29ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಭವಿಷ್ಯದ ಪರಿಸರ ರಕ್ಷಣೆಗೆ ನೀಡುವ ಬಲವಾದ ಸಂದೇಶವಾಗಿದೆ.

ಈ ದಿನವನ್ನು ಏಕೆ ಆಚರಿಸಬೇಕು?

ಜಾಗ್ವಾರ್‌ಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿರುವುದರಿಂದ ಸಂರಕ್ಷಣೆಯ ಅಗತ್ಯ ತೀವ್ರವಾಗಿದೆ. ಅಷ್ಟೇ ಅಲ್ಲದೆ ಅರಣ್ಯದ ಆಹಾರ ಸರಪಳಿಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಜಾಗ್ವಾರ್‌ಗಳ ಪಾತ್ರ ಮಹತ್ವದ್ದಾಗಿದೆ. ಜೀವವೈವಿಧ್ಯ ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶ.

2018ರಲ್ಲಿ ಜಾಗ್ವಾರ್‌ಗಳ ಸಂರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದದ ನಂತರ ಅಧಿಕೃತವಾಗಿ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಮೊದಲಿಗೆ ಆರಂಭವಾದ ಈ ಚಳವಳಿ ಇಂದು ಜಗತ್ತಿನಾದ್ಯಂತ ಬೆಳೆದು ಬಂದಿದೆ.

ಅಂತಾರಾಷ್ಟ್ರೀಯ ಜಾಗ್ವಾರ್ ದಿನ ನಮಗೆ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕಬೇಕೆಂಬ ಕರ್ತವ್ಯವನ್ನು ನೆನಪಿಸುವ ದಿನವಾಗಿದೆ. ಜಾಗ್ವಾರ್ ಉಳಿದರೆ ಅರಣ್ಯ ಉಳಿಯುತ್ತದೆ, ಅರಣ್ಯ ಉಳಿದರೆ ನಮ್ಮ ಭವಿಷ್ಯ ಸುರಕ್ಷಿತವಾಗಿರುತ್ತದೆ.

Most Read

error: Content is protected !!