ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಆಕ್ಷನ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿದ್ದ 350 ಆಟಗಾರರ ಪಟ್ಟಿಗೆ ಇದೀಗ ಹೆಚ್ಚುವರಿಯಾಗಿ 19 ಆಟಗಾರರನ್ನು ಸೇರ್ಪಡೆಗೊಳಿಸಿ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದೆ.
ಈ ವಿಶೇಷ ಸೇರ್ಪಡೆಗಳಲ್ಲಿ ಕರ್ನಾಟಕದ ಪ್ರತಿಭಾವಂತ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ಶ್ರೀಜಿತ್ ಅವರ ಹೆಸರೂ ಸೇರಿದೆ. ಕಳೆದ ಸೀಸನ್‌ನಲ್ಲಿ ಶ್ರೀಜಿತ್ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ, ಅವರಿಗೆ ಅಂತಿಮ 11ರ ಬಳಗದಲ್ಲಿ ಆಡುವ ಅವಕಾಶ ದೊರಕಿರಲಿಲ್ಲ. ಅಚ್ಚರಿ ಎಂದರೆ, ಈ ಬಾರಿಯ ಆರಂಭಿಕ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ, ಆದರೆ ಈಗ ಪರಿಷ್ಕೃತ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅವರಿಗೆ ಮತ್ತೆ ಅವಕಾಶ ನೀಡಿದೆ.
ಪರಿಷ್ಕೃತ ಪಟ್ಟಿಯಲ್ಲಿ ಕೆಎಲ್ ಶ್ರೀಜಿತ್ ಮಾತ್ರವಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ಆಟಗಾರ ಸ್ವಸ್ತಿಕ್ ಚಿಕಾರ, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಝರಬಾನಿ, ಮತ್ತು ಆಸ್ಟ್ರೇಲಿಯಾದ ಆಟಗಾರ ಕ್ರಿಸ್ ಗ್ರೀನ್ ಸೇರಿದಂತೆ ಅನೇಕ ಪ್ರಮುಖ ಹೆಸರುಗಳು ಸೇರಿಕೊಂಡಿವೆ.
ಸೇರ್ಪಡೆಗೊಂಡ 19 ಆಟಗಾರರು ಮತ್ತು ಅವರ ಮೂಲ ಬೆಲೆ ಇಲ್ಲಿದೆ:
| ಆಟಗಾರನ ಹೆಸರು | ಮೂಲ ಬೆಲೆ |
| ಕೈಲ್ ವೆರ್ರೆನ್ | 1.25 ಕೋಟಿ |
| ಬೆನ್ ಸಿಯರ್ಸ್ | 1.50 ಕೋಟಿ |
| ಎಥಾನ್ ಬಾಷ್ | 75 ಲಕ್ಷ |
| ಕ್ರಿಸ್ ಗ್ರೀನ್ | 75 ಲಕ್ಷ |
| ಬ್ಲೆಸ್ಸಿಂಗ್ ಮುಝರಬಾನಿ | 75 ಲಕ್ಷ |
| ಮಣಿಶಂಕರ್ ಮುರಾಸಿಂಗ್ | 30 ಲಕ್ಷ |
| ಸ್ವಸ್ತಿಕ್ ಚಿಕಾರ | 30 ಲಕ್ಷ |
| ವಿರಂದೀಪ್ ಸಿಂಗ್ | 30 ಲಕ್ಷ |
| ಚಾಮಾ ಮಿಲಿಂದ್ | 30 ಲಕ್ಷ |
| ಕೆಎಲ್ ಶ್ರೀಜಿತ್ | 30 ಲಕ್ಷ |
| ರಾಹುಲ್ ರಾಜ್ | 30 ಲಕ್ಷ |
| ವಿರಾಟ್ ಸಿಂಗ್ | 30 ಲಕ್ಷ |
| ಅಭಿಮನ್ಯು ಈಶ್ವರನ್ | 30 ಲಕ್ಷ |
| ತ್ರಿಪುರೇಶ್ ಸಿಂಗ್ | 30 ಲಕ್ಷ |
| ರಾಜೇಶ್ ಮೊಹಂತಿ | 30 ಲಕ್ಷ |
| ಸ್ವಸ್ತಿಕ್ ಸಮಲ್ | 30 ಲಕ್ಷ |
| ಸೂರಜ್ ಸಂಗರಾಜು | 30 ಲಕ್ಷ |
| ತನ್ಮಯ್ ಅಗರ್ವಾಲ್ | 30 ಲಕ್ಷ |
| ಸರನ್ಶ್ ಜೈನ್ | 30 ಲಕ್ಷ |
ಈ ಹೆಚ್ಚುವರಿ ಸೇರ್ಪಡೆಯೊಂದಿಗೆ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಒಟ್ಟು 369 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

