ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮತ್ತೆ ಐಪಿಎಲ್ ಮ್ಯಾಚ್ ನಡೆಯಲಿದ್ದು, ಅಭಿಮಾನಿಗಳಿಗೆ ಮತ್ತೊಮ್ಮೆ ಹೈವೋಲ್ಟೇಜ್ ಪಂದ್ಯಗಳ ರಸದೌತಣ ಸಿಗಲಿದೆ. ಹೀಗಾಗಿ ಈ ಸಂಭ್ರಮಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಾಗೂ ಬಿಎಂಟಿಸಿ ಕೂಡ ಸಾಥ್ ನೀಡಲು ಮುಂದಾಗಿದ್ದು, ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ.
ಏಪ್ರಿಲ್ 15, 18 ಮತ್ತು 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಈ ವೇಳೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಬಿಎಂಆರ್ಸಿಎಲ್ ಘೋಷಿಸಿದೆ.ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ಸಂಚಾರ ಇರಲಿದೆ.
ವೈಟ್‌ಫೀಲ್ಡ್, ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ಕಡೆಯಿಂದ ಮಧ್ಯರಾತ್ರಿ 12:30 ರಿಂದ 12:45ರ ಸುಮಾರಿಗೆ ಕೊನೆಯ ರೈಲುಗಳುಹೊರಡಲಿವೆ. ಆರ್.ವಿ. ರಸ್ತೆಯಿಂದ ಮಧ್ಯರಾತ್ರಿ 2:00 ಗಂಟೆಗೆ ಕೊನೆಯ ರೈಲು ಸಿಗಲಿದೆ. ಇನ್ನು ಮೆಜೆಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕುಗಳಿಗೆ 1:30ಕ್ಕೆ ರೈಲುಗಳು ಸಂಚರಿಸಲಿದೆ. ಐಪಿಎಲ್ ಡಿಜಿಟಲ್ ಟಿಕೆಟ್‌ನಲ್ಲಿರುವ ಕ್ಯೂಆರ್ (QR) ಕೋಡ್ ಬಳಸಿ ಪ್ರಯಾಣಿಸಬಹುದಾಗಿದೆ.
ಇನ್ನು ಬಿಎಂಟಿಸಿ ಬಸ್ಗಳು ವಿಶೇಷ ಕಾರ್ಯಾಚರಣೆ ನಡೆಸಾಲು ಮುಂದಾಗಿದ್ದು, ಬಸ್‌ಗಳ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸರ್ಜಾಪುರ ಮತ್ತು ಕಾಡುಗೋಡಿ ಬಸ್ ನಿಲ್ದಾಣ,ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ) ,ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್,ಆರ್.ಕೆ. ಹೆಗಡೆ ನಗರ – ಯಲಹಂಕ (ನಾಗವಾರ, ಟ್ಯಾನರಿ ರಸ್ತೆ ಮೂಲಕ),ಹೊಸಕೋಟೆ, ಬನಶಂಕರಿ ಕಡೆ ಬಸ್ ವ್ಯವಸ್ಥೆ ಇರಲಿದೆ ಎಂದು ಇಲಾಖೆ ತಿಳಿಸಿದೆ.



