Saturday, October 11, 2025

ಐಪಿಎಲ್ 2026: ಮಿನಿ ಹರಾಜಿಗೂ ಮುನ್ನ CSK ತಂಡದಿಂದ 5 ಆಟಗಾರರು ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮಿನಿ ಹರಾಜಿಗೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ದೊಡ್ಡ ಬದಲಾವಣೆಗಳ ಸಾಧ್ಯತೆ ಹೆಚ್ಚಾಗಿದೆ. CSK ಫ್ರಾಂಚೈಸಿ ಕಳೆದ ಸೀಸನ್‌ನಲ್ಲಿ ನಿರಾಶಾಜನಕ ಪ್ರದರ್ಶನ ನೀಡಿದ್ದ ಐವರು ಆಟಗಾರರನ್ನು ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡುವ ನಿರ್ಧಾರಕ್ಕೆ ತಲುಪಿದೆ. ಈ ಮೂಲಕ ತಂಡಕ್ಕೆ ಹೆಚ್ಚಿನ ಪರ್ಸ್ ಮೌಲ್ಯವನ್ನು ಹೊಂದಲು ಅವಕಾಶ ಸಿಗಲಿದೆ.

ಹೊರಬೀಳಲಿರುವ ಆಟಗಾರರು

  • ದೀಪಕ್ ಹೂಡಾ: 2025ರ ಮೆಗಾ ಹರಾಜಿನಲ್ಲಿ 1.70 ಕೋಟಿ ರೂ.ಗೆ ಖರೀದಿಸಲಾಗಿದ್ದ ಹೂಡಾ ಕಳೆದ ಸೀಸನ್‌ನಲ್ಲಿ 7 ಪಂದ್ಯಗಳಲ್ಲಿ ಕೇವಲ 31 ರನ್‌ಗಳನ್ನಷ್ಟೇ ಗಳಿಸಿದ್ದರು. ಇದರ ಪರಿಣಾಮವಾಗಿ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ.
  • ವಿಜಯ್ ಶಂಕರ್: ತಮಿಳುನಾಡು ಮೂಲದ ಆಲ್‌ರೌಂಡರ್ ವಿಜಯ್ ಶಂಕರ್ 1.2 ಕೋಟಿ ರೂ.ಗೆ ಖರೀದಿಸಲಾಗಿತ್ತು. ಕಳೆದ ಸೀಸನ್‌ನಲ್ಲಿ 6 ಪಂದ್ಯಗಳಲ್ಲಿ 112 ರನ್ ಗಳಿಸಿದ್ದ ಅವರು ಹರಾಜಿಗೆ ಮುನ್ನ ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ.
  • ರಾಹುಲ್ ತ್ರಿಪಾಠಿ: 3.40 ಕೋಟಿ ರೂ.ಗೆ ಖರೀದಿಯಾದ ತ್ರಿಪಾಠಿ 5 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದರಿಂದ ಈ ಬಾರಿ ಹರಾಜಿಗೆ ಮುನ್ನ ಬಿಡುಗಡೆಗೆ ಮಾರ್ಗ ಸಿದ್ಧವಾಗಿದೆ.
  • ಸ್ಯಾಮ್ ಕರನ್: 2.4 ಕೋಟಿ ರೂ. ಸಂಭಾವನೆ ಪಡೆದಿದ್ದ ಕರನ್ ಕಳೆದ ಸೀಸನ್‌ನಲ್ಲಿ 5 ಪಂದ್ಯಗಳಲ್ಲಿ 114 ರನ್ ಮಾತ್ರ ಗಳಿಸಿದ್ದರು ಹಾಗೂ ಒಂದೇ ವಿಕೆಟ್ ಪಡೆದಿದ್ದರು. ಆದ್ದರಿಂದ ಅವರಿಗೆ ಕೂಡ ಹರಾಜಿನ ಮುನ್ನ ಬಿಡುಗಡೆ ನೀಡಲಾಗಲಿದೆ.
  • ಡೆವೊನ್ ಕಾನ್ವೆ: ಕಳೆದ 6 ಪಂದ್ಯಗಳಲ್ಲಿ 156 ರನ್ ಗಳಿಸಿರುವ ಡೆವೊನ್ ಕಾನ್ವೆ ತಂಡದಿಂದ ಬಿಡುಗಡೆಯಾಗಲಿದೆ. ಇದರೊಂದಿಗೆ CSK 6.25 ಕೋಟಿ ರೂ. ಪರ್ಸ್ ಮೊತ್ತವನ್ನು ಹೆಚ್ಚಿಸಲು ಸಿದ್ಧವಾಗಿದೆ.
error: Content is protected !!