January15, 2026
Thursday, January 15, 2026
spot_img

IPL 2026: ಮಿನಿ ಹರಾಜಿಗೆ ಕೌಂಟ್‌ಡೌನ್! ಟಾಪ್ 5 ಸೆಟ್‌ನಲ್ಲಿ 34 ಸ್ಟಾರ್ ಆಟಗಾರರ ಭವಿಷ್ಯ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮಿನಿ ಹರಾಜು ನಾಳೆ ಅಬುಧಾಬಿಯಲ್ಲಿ ನಡೆಯಲಿದ್ದು, ಕ್ರಿಕೆಟ್ ಜಗತ್ತಿನ ಗಮನವೆಲ್ಲ ಈಗ ಈತ್ತ ನೆಟ್ಟಿದೆ. ಒಟ್ಟು 359 ಆಟಗಾರರ ಹಣೆಬರಹ ನಿರ್ಧಾರವಾಗಲಿರುವ ಈ ಮಹತ್ವದ ಹರಾಜಿಗೆ ವೇದಿಕೆ ಸಿದ್ಧವಾಗಿದೆ.

ಮೊದಲ ಹಂತದಲ್ಲಿಯೇ ಬಿಡ್ಡಿಂಗ್ ಸಮರಕ್ಕೆ ಸಾಕ್ಷಿಯಾಗಲಿರುವ 34 ಪ್ರಮುಖ ಆಟಗಾರರನ್ನು ಒಳಗೊಂಡಂತೆ ಹರಾಜನ್ನು ಮೊದಲ 5 ಸೆಟ್‌ಗಳಲ್ಲಿ ವಿಭಾಗಿಸಲಾಗಿದೆ. ಅಂದರೆ, ಆರಂಭದ ಐದು ಸೆಟ್‌ಗಳು ಮುಗಿದ ಬಳಿಕವಷ್ಟೇ ಉಳಿದ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

ಪ್ರತಿ ಫ್ರಾಂಚೈಸಿಯ ಯೋಜನೆಗಳನ್ನು ರೂಪಿಸಲಿರುವ ಮತ್ತು ಹರಾಜಿನ ಗತಿಯನ್ನು ನಿರ್ಧರಿಸಲಿರುವ ಈ ಟಾಪ್-5 ಸೆಟ್‌ಗಳಲ್ಲಿರುವ 34 ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ:

ಸೆಟ್ ವರ್ಗಪ್ರಮುಖ ಆಟಗಾರರು
ಪ್ರಮುಖ ಬ್ಯಾಟರ್‌ಗಳುಡೆವೊನ್ ಕಾನ್ವೆ (ನ್ಯೂಝಿಲೆಂಡ್), ಜೇಕ್ ಫ್ರೆಸರ್ ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಕ್ಯಾಮರೋನ್ ಗ್ರೀನ್ (ಆಸ್ಟ್ರೇಲಿಯಾ), ಸರ್ಫರಾಝ್ ಖಾನ್ (ಭಾರತ), ಡೇವಿಡ್ ಮಿಲ್ಲರ್ (ಸೌತ್ ಆಫ್ರಿಕಾ), ಪೃಥ್ವಿ ಶಾ (ಭಾರತ).
ಪ್ರಮುಖ ಆಲ್‌ರೌಂಡರ್‌ಗಳುಗಸ್ ಅಟ್ಕಿನ್ಸನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ದೀಪಕ್ ಹೂಡಾ (ಭಾರತ), ವೆಂಕಟೇಶ್ ಅಯ್ಯರ್ (ಭಾರತ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ವಿಯಾನ್ ಮುಲ್ಡರ್ (ಸೌತ್ ಆಫ್ರಿಕಾ), ರಚಿನ್ ರವೀಂದ್ರ (ನ್ಯೂಝಿಲೆಂಡ್).
ಪ್ರಮುಖ ವಿಕೆಟ್‌ಕೀಪರ್‌ಗಳುಫಿನ್ ಅಲೆನ್ (ನ್ಯೂಝಿಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಕೆಎಸ್ ಭರತ್ (ಭಾರತ), ಕ್ವಿಂಟನ್ ಡಿ ಕಾಕ್ (ಸೌತ್ ಆಫ್ರಿಕಾ), ಬೆನ್ ಡಕೆಟ್ (ಇಂಗ್ಲೆಂಡ್), ರಾಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಜೇಮಿ ಸ್ಮಿತ್ (ಇಂಗ್ಲೆಂಡ್).
ಪ್ರಮುಖ ವೇಗಿಗಳುಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ), ಆಕಾಶ್ ದೀಪ್ (ಭಾರತ), ಜೇಕಬ್ ಡಫಿ (ನ್ಯೂಝಿಲೆಂಡ್), ಫಝಲ್​ಹಕ್ ಫಾರೂಕಿ (ಅಫ್ಘಾನಿಸ್ತಾನ್), ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಶಿವಂ ಮಾವಿ (ಭಾರತ), ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ), ಮಥೀಶ ಪತಿರಾಣ (ಶ್ರೀಲಂಕಾ).
ಪ್ರಮುಖ ಸ್ಪಿನ್ನರ್‌ಗಳುರವಿ ಬಿಷ್ಣೋಯ್ (ಭಾರತ), ರಾಹುಲ್ ಚಹರ್ (ಭಾರತ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಮುಜೀಬ್ ಉರ್ ರೆಹಮಾನ್ (ಅಫ್ಗಾನಿಸ್ತಾನ್), ಮಹೀಶ್ ತೀಕ್ಷಣ (ಶ್ರೀಲಂಕಾ).

Most Read

error: Content is protected !!