Friday, December 19, 2025

IPL Auction |ಬರೋಬ್ಬರಿ 25.2 ಕೋಟಿ ರೂ.ಗೆ ಹರಾಜಾದ ಗ್ರೀನ್! ಖರೀದಿಸಿದ್ದು ಯಾವ ಟೀಮ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಮಿನಿ ಹರಾಜು ಆರಂಭವಾಗುತ್ತಿದ್ದಂತೆಯೇ ಭರ್ಜರಿ ಬಿಡ್‌ಗಳು ಗಮನ ಸೆಳೆದಿವೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತದ ಒಪ್ಪಂದವೊಂದು ಸಿಕ್ಕಿದ್ದು, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೋನ್ ಗ್ರೀನ್ 25.20 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ.

ಹರಾಜಿನಲ್ಲಿ ಗ್ರೀನ್ ಹೆಸರು ಬಂದಾಗ ಹಲವು ಫ್ರಾಂಚೈಸಿಗಳು ಆಸಕ್ತಿ ತೋರಿದರೂ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಹೆಚ್ಚಿನ ಮೊತ್ತ ನೀಡಿದ ಕೆಕೆಆರ್, ಗ್ರೀನ್ ಅವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿತು. ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್‌ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ, ಅವರ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶದಿಂದಲೇ ಕೆಕೆಆರ್ ಈ ದೊಡ್ಡ ಹೂಡಿಕೆಗೆ ಮುಂದಾಗಿದೆ.

ಕ್ಯಾಮರೋನ್ ಗ್ರೀನ್ ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದರು. 2023ರಲ್ಲಿ ಮುಂಬೈ ಪರ ಐಪಿಎಲ್‌ಗೆ ಕಾಲಿಟ್ಟ ಅವರು, 2024ರಲ್ಲಿ ಆರ್‌ಸಿಬಿ ಜೆರ್ಸಿ ಧರಿಸಿದ್ದರು. ಇದೀಗ ಮೂರನೇ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಹೊಸ ಅಧ್ಯಾಯ ಆರಂಭಿಸಲಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಮರ್ಥ್ಯ ಹೊಂದಿರುವ ಗ್ರೀನ್, ಮಧ್ಯಕ್ರಮದಲ್ಲಿ ತಂಡಕ್ಕೆ ಬಲ ತುಂಬುವ ನಿರೀಕ್ಷೆಯಿದೆ.

error: Content is protected !!