March 30, 2026
Monday, March 30, 2026
spot_img

IPL | 220 ರನ್‌ ಬಾರಿಸಿದರೂ ಸೋಲಿನ ಕಹಿ ಉಂಡ ಕೆಕೆಆರ್‌: ಅನುಭವ ಇಲ್ಲ ಎಂದ ರಹಾನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ತಂಡದ ಬೌಲಿಂಗ್ ವಿಭಾಗದ ಅನುಭವದ ಕೊರತೆಯೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ರಹಾನೆ, 220-225 ರನ್ ಉತ್ತಮ ಟೋಟಲ್ ಎಂದು ನಾವು ಭಾವಿಸಿದ್ದೆವು. ಬ್ಯಾಟಿಂಗ್ ವಿಭಾಗ ಚೆನ್ನಾಗಿ ಆಡಿತು. ಆದರೆ ನಮ್ಮ ಬೌಲಿಂಗ್ ದಾಳಿಯಲ್ಲಿ ಅನುಭವದ ಕೊರತೆ ಸ್ಪಷ್ಟವಾಗಿ ಕಾಣಿಸಿತು ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ನಮ್ಮ ಯುವ ಬೌಲರ್‌ಗಳಿಗೆ ಇದು ದೊಡ್ಡ ಕಲಿಕೆಯ ಅನುಭವ. ವೈಭವ್ ಅರೋರ, ಕಾರ್ತಿಕ್ ತ್ಯಾಗಿ ಹಾಗೂ ಬ್ಲೆಸಿಂಗ್ ಮುಝರಬಾನಿ ಇನ್ನೂ ಹೆಚ್ಚಿನ ಐಪಿಎಲ್ ಅನುಭವ ಹೊಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:

ರಹಾನೆ ಅವರ ಮಾತಿನ ಪ್ರಕಾರ, ಈ ಸೋಲು ತಂಡಕ್ಕೆ ಎಚ್ಚರಿಕೆಯ ಗಂಟೆಯಂತಿದ್ದು, ಮುಂದಿನ ಪಂದ್ಯಗಳಲ್ಲಿ ಯುವ ಬೌಲರ್‌ಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸವಿದೆ. ಈ ಹುಡುಗರು ಖಂಡಿತವಾಗಿಯೂ ಕಲಿಯುತ್ತಾರೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಕಂಬ್ಯಾಕ್ ಮಾಡುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಈ ಪಂದ್ಯದಲ್ಲಿ ರಹಾನೆ ಸ್ವತಃ 40 ಎಸೆತಗಳಲ್ಲಿ 67 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೂ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಮಧ್ಯದಲ್ಲಿ ಸ್ನಾಯು ಸೆಳೆತದಿಂದ ಮೈದಾನ ತೊರೆದಿದ್ದ ಅವರು, ಗಾಯ ಗಂಭೀರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !