January17, 2026
Saturday, January 17, 2026
spot_img

ಐಪಿಎಲ್ ಮಿನಿ ಹರಾಜು: ಮುಂಬೈ ಇಂಡಿಯನ್ಸ್ ನಿಂದ ಈ ನಾಲ್ಕು ಆಟಗಾರರಿಗೆ ಗೇಟ್‌ಪಾಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, ಕಳಪೆ ಪ್ರದರ್ಶನ ತೋರಿದ ಹಾಗೂ ಬೆಂಚ್ ಕಾಯಿಸಿದ್ದ ಕೆಲ ಆಟಗಾರರಿಗೆ ಗೇಟ್‌ಪಾಸ್ ನೀಡಲು ತೀರ್ಮಾನಿಸಿದೆ.

ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡು, ಬೇಡವಾದ ಆಟಗಾರರನ್ನು ರಿಲೀಸ್ ಮಾಡಲು ಮುಂಬರುವ ನವೆಂಬರ್ 15ರವರೆಗೂ ಬಿಸಿಸಿಐ ಕಾಲಾವಕಾಶ ನೀಡಿದೆ.

ಇದೀಗ ಮುಂಬೈ ಇಂಡಿಯನ್ಸ್ ನಾಲ್ಕು ಪ್ರಮುಖ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ವೇಗದ ಬೌಲರ್ ಲಿಜ್ಜಾರ್ಡ್ ವಿಲಿಯಮ್ಸ್ ಅವರನ್ನು ಬ್ಯಾಕ್‌ಅಪ್ ಬೌಲರ್ ಆಗಿ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವಿಲಿಯಮ್ಸ್‌ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಲಿಜ್ಜಾರ್ಡ್ ವಿಲಿಯಮ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆಯಿದೆ.

ಇಂಗ್ಲೆಂಡ್ ಮೂಲದ ಎಡಗೈ ವೇಗಿ ರೀಸ್ ಟಾಪ್ಲೆಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 75 ಲಕ್ಷ ರುಪಾಯಿ ನೀಡಿ ಖರೀಸಿದಿಸಿತ್ತು. ಆದರೆ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಟಾಪ್ಲೆಗೂ ಮುಂಬೈ ಫ್ರಾಂಚೈಸಿ ಗೇಟ್‌ಪಾಸ್ ನೀಡುವ ಸಾಧ್ಯತೆ ಹೆಚ್ಚಿದೆ.

ಆಫ್ಘಾನಿಸ್ತಾನ ಮೂಲದ ಪ್ರತಿಭಾನ್ವಿತ ಯುವ ಲೆಗ್‌ ಸ್ಪಿನ್ನರ್ ಘಜನ್‌ಫರ್ ಅವರನ್ನು ಬರೋಬ್ಬರಿ 4.8 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಒಂದೇ ಒಂದು ಐಪಿಎಲ್ ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ. ಘಜನ್‌ಫರ್ ಕೂಡಾ ಈ ಬಾರಿ ರೀಟೈನ್ ಆಗೋದು ಅನುಮಾನ.

ಬರೋಬ್ಬರಿ 9.25 ಕೋಟಿ ರುಪಾಯಿ ಪಡೆದುಕೊಂಡು ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದ ದೀಪಕ್ ಚಹರ್, 14 ಪಂದ್ಯಗಳನ್ನಾಡಿ ಕೇವಲ 11 ವಿಕೆಟ್ ಮಾತ್ರ ಪಡೆದಿದ್ದರು. ಪವರ್‌ ಪ್ಲೇನಲ್ಲಿ ಮತ್ತೋರ್ವ ಮಾರಕ ವೇಗಿ ಖರೀದಿಸಲು ದೀಪಕ್ ಚಹರ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆ ಹೆಚ್ಚಿದೆ.

Must Read

error: Content is protected !!