Thursday, December 18, 2025

ಐಪಿಎಲ್​​ನ ಮಿನಿ ಹರಾಜು: ಮಾಜಿ CSK ಸ್ಟಾರ್​ಗೆ ಕೋಟಿ ಕೋಟಿ ಬಿಡ್ ಮಾಡಿ ಗೆದ್ದ KKR!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್​​ನ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಮಥೀಶ ಪತಿರಣ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 18 ಕೋಟಿಗೆ ಖರೀದಿಸಿದೆ.

ಕಳೆದ ಸೀಸನ್​ಗಳಲ್ಲಿ ಪತಿರಣ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಈ ಬಾರಿಯ ಹರಾಜಿನ ಆರಂಭದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡಿದವು. ಡೆಲ್ಲಿ ಮತ್ತು ಎಲ್​ಎಸ್​ಜಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದಾಗ, ಕೋಲ್ಕತ್ತ ನೈಟ್ ರೈಡರ್ಸ್ ಬಿಗ್ ಸರ್ಪ್ರೈಸ್ ನೀಡಿತು. ಪತಿರಣ ಮೇಲೆ ಕೆಕೆಆರ್​ 18 ಕೋಟಿ ಬಿಡ್ ಮಾಡಿ ಖರೀದಿಸಿತು.

ಕೆಕೆಆರ್ ಈಗಾಗಲೇ 25.20 ಕೋಟಿ ಹಣ ನೀಡಿ, ಕ್ಯಾಮರೂನ್ ಗ್ರೀನ್ ಅವರನ್ನು ಖರಿದಿದೆ. ಗ್ರೀನ್ ಬೆನ್ನಲ್ಲೇ ಮತ್ತೊಂದು ದುಬಾರಿ ಬಿಡ್ ಮಾಡಿ ಗೆದ್ದಿದೆ. ಪತಿರಣಗೆ 18 ಕೋಟಿ ನೀಡುವ ಮೂಲಕ ಸ್ಟ್ರಾಂಗ್ ಟೀಂ ಕಟ್ಟಲು ಕೆಕೆಆರ್ ದಿಟ್ಟ ಹೆಜ್ಜೆಯನ್ನಿಟ್ಟಿದೆ.

error: Content is protected !!