ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸಂದಣಿ ತುಂಬಿದ್ದ ಮಾರುಕಟ್ಟೆ ಪ್ರದೇಶದಲ್ಲಿ ಆಕಸ್ಮಿಕವಾಗಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಮಧ್ಯ ಇರಾನ್‌ನ ಇಸ್ಫಹಾನ್ ಪ್ರಾಂತ್ಯದ ಡೋರ್ಚೆ ಪಟ್ಟಣದಲ್ಲಿ ನಡೆದಿದೆ.
ತರಬೇತಿ ಹಾರಾಟ ನಡೆಸುತ್ತಿದ್ದ ಇರಾನ್ ವಾಯುಪಡೆಯ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಹಣ್ಣು-ತರಕಾರಿ ಮಾರುಕಟ್ಟೆ ಮೇಲೆ ಅಪ್ಪಳಿಸಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಪೈಲಟ್ ಮತ್ತು ಸಹ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾರುಕಟ್ಟೆ ಪ್ರದೇಶದಲ್ಲಿದ್ದ ಇಬ್ಬರು ನಾಗರಿಕರು ಕೂಡ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
ಘಟನಾ ಸ್ಥಳದಲ್ಲಿ ಅವಶೇಷಗಳು ಚದುರಿಕೊಂಡಿದ್ದು, ಹೊಗೆ ಆವರಿಸಿಕೊಂಡಿದ್ದು. ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.
ಇಸ್ಫಹಾನ್ ಪ್ರಾಂತ್ಯವು ದೇಶದ ಪ್ರಮುಖ ಪರಮಾಣು ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ. ಇತ್ತೀಚೆಗೆ ಭದ್ರತೆ ಹೆಚ್ಚಿಸಲಾಗಿದ್ದ ಈ ಪ್ರದೇಶದಲ್ಲಿ ನಡೆದ ಅಪಘಾತ ಆತಂಕ ಮೂಡಿಸಿದೆ. ವಾರದೊಳಗೆ ನಡೆದ ಎರಡನೇ ವೈಮಾನಿಕ ದುರಂತವಾಗಿರುವುದು ಗಮನಾರ್ಹ. ಇತ್ತೀಚೆಗೆ ಹಮೆದಾನ್ ಸಮೀಪ ಯುದ್ಧ ವಿಮಾನ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದ ಘಟನೆ ಕೂಡ ನಡೆದಿತ್ತು.



