March 3, 2026
Tuesday, March 3, 2026
spot_img

Iran Israel War | ಇರಾನ್ ನ 131 ನಗರಗಳ ಮೇಲೆ ದಾಳಿ, ಮಕ್ಕಳು ಸೇರಿ 742 ನಾಗರಿಕರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಹಾಗೂ ಇಸ್ರೇಲ್ ಸೇನೆ ಇರಾನ್‌ನ ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಮಿಸೈಲ್ ದಾಳಿಗಳನ್ನು ತೀವ್ರಗೊಳಿಸಿದ್ದಾಗಿ ವರದಿಯಾಗಿದೆ. ಪ್ರತಿಯಾಗಿ ಇರಾನ್ ಕೂಡಾ ಅಮೆರಿಕದ ಸೇನಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸುತ್ತಿರುವುದರಿಂದ ಪಶ್ಚಿಮ ಏಷ್ಯಾದ ಪರಿಸ್ಥಿತಿ ಉದ್ವಿಗ್ನವಾಗಿದೆ.

ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಸ್ಥೆ HRANA ನೀಡಿದ ಮಾಹಿತಿಯಂತೆ, ಇರಾನ್‌ನಲ್ಲಿ 176 ಮಕ್ಕಳು ಸೇರಿದಂತೆ ಕನಿಷ್ಠ 742 ನಾಗರಿಕರು ಸಾವಿಗೀಡಾಗಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಾತ್ರ 85ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ಅಂಕಿ-ಅಂಶಗಳು ಸೂಚಿಸುತ್ತವೆ. ದೇಶದ 131 ನಗರಗಳು ದಾಳಿಗೆ ಒಳಗಾಗಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ:

ಇನ್ನೊಂದೆಡೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ ಟೆಲ್ ಅವೀವ್, ಹೈಫಾ ಹಾಗೂ ಜೆರುಸಲೇಂ ಪ್ರದೇಶಗಳಲ್ಲಿ ಗುರಿ ಸಾಧಿಸಿದ್ದಾಗಿ ಹೇಳಿಕೊಂಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸವೂ ಗುರಿಯಾಗಿದೆಯೆಂಬ ಮಾಹಿತಿ ಹರಿದಾಡುತ್ತಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದ್ದು, ಜಾಗತಿಕ ಸಮುದಾಯ ಆತಂಕದಿಂದ ಗಮನಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !