ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಕದನ ಉಲ್ಬಣಗೊಂಡಿದ್ದು, ಇರಾನ್ ಕ್ಷಿಪಣಿ ದಾಳಿಗೆ ತುತ್ತಾದ ‘ಸ್ಕೈಲೈಟ್’ಎಂಬ ತೈಲ ನೌಕೆಯಲ್ಲಿದ್ದ ಇಬ್ಬರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಬಿಹಾರದ ಕ್ಯಾಪ್ಟನ್ ಆಶಿಶ್ ಕುಮಾರ್ ಮತ್ತು ರಾಜಸ್ಥಾನದ ನಾವಿಕ ದಲೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ತೈಲ ನೌಕೆಯು ಒಮನ್‌ನ ಮುಸಂದಮ್ ಪರ್ಯಾಯ ದ್ವೀಪದ ಸಮೀಪ ದಾಳಿಗೆ ಒಳಗಾಗಿದೆ. ಈ ಹಡಗಿನಲ್ಲಿ ಒಟ್ಟು 20 ಸಿಬ್ಬಂದಿ ಇದ್ದರು. ಅವರಲ್ಲಿ 15 ಮಂದಿ ಭಾರತೀಯರು ಮತ್ತು 5 ಮಂದಿ ಇರಾನಿ ಪ್ರಜೆಗಳು. ದಾಳಿಯ ನಂತರ ಒಮನ್‌ನ ಕಡಲ ಭದ್ರತಾ ಕೇಂದ್ರವು (MSC) ಎಲ್ಲ 20 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ , ಆದರೆ ಇಬ್ಬರು ನಾವಿಕರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.



