Tuesday, September 9, 2025

IRCTC | ಪ್ರವಾಸ ಪ್ರಿಯರೇ ಗಮನಿಸಿ.. ಬೆಂಗಳೂರಿನಿಂದ ದೇಶಿಯ-ಅಂತರರಾಷ್ಟ್ರೀಯ ವಿಮಾನ ಪ್ರವಾಸ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೈಲ್ವೆ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಯಾದ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಬೆಂಗಳೂರಿನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರವಾಸದ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

ಈ ಮೂಲಕ ಐಆರ್‌ಸಿಟಿಸಿ, ದೇಶ ಮತ್ತು ವಿದೇಶದ ಅನೇಕ ಪ್ರವಾಸಿ ಸ್ಥಳಗಳಿಗೆ ಕೈಗೆಟುಕುವ ಬೆಲೆಯಲ್ಲಿ ಜನರು ತಮ್ಮ ಕನಸಿನ ಸ್ಥಳಕ್ಕೆ ಪ್ರವಾಸ ಮಾಡುವ ಅವಕಾಶ ಮಾಡಿಕೊಟ್ಟಿದೆ.

ಪ್ಯಾಕೇಜ್ ನಲ್ಲಿ ಪ್ರವಾಸ ವಿಮೆ, ಪ್ರಯಾಣದ ವೆಚ್ಚ, ಆಹಾರ, ವಾಸ್ತವ್ಯ, ದೃಶ್ಯವೀಕ್ಷಣೆ ಸೇರಿದಂತೆ ಅನೇಕ ವೆಚ್ಚಗಳನ್ನು ಕೂಡ ಸೇರ್ಪಡೆಯಾಗಿದೆ.

ಡೀಟೇಲ್ಸ್‌ ಇಲ್ಲಿದೆ..

ಲಡಾಖ್‌ಗೆ 7 ದಿನಗಳ ಪ್ರವಾಸ ಆ.13ಕ್ಕೆ ಆರಂಭವಾಗಲಿದೆ. ಲೇಹ್, ಶಾಮ್ ವ್ಯಾಲಿ , ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗಳನ್ನು ಒಳಗೊಂಡ ಈ ಪ್ರವಾಸಕ್ಕೆ ಒಬ್ಬರಿಗೆ 57,950 ರೂ. ದರ ಇರಲಿದೆ.

10 Highlights In Leh Ladakh, Must Read Before Plan Your Vacation | Home  iTour- Blog ಮಧ್ಯಪ್ರದೇಶದ ಜ್ಯೋತಿರ್ಲಿಂಗಗಳು 4 ದಿನಗಳ ಪ್ರವಾಸ ಆ.21ಕ್ಕೆ ಆರಂಭವಾಗಲಿದ್ದು, ಓಂಕಾರೇಶ್ವರ, ಮಹಾಕಾಲೇಶ್ವರ ಮತ್ತು ಇಂದೋರ್‌ಗಳಿಗೆ ಭೇಟಿ ಇರಲಿದೆ.

Mahakaleshwar Jyotirlinga - Wikipediaರೂ.24,600 ಪ್ರವಾಸ ದರ ನಿಗದಿಯಾಗಿದೆ. ಅಯೋಧ್ಯೆ, ಗಯಾ, ಕಾಶಿ ಮತ್ತು ಪ್ರಯಾಗ್‌ರಾಜ್ 6 ದಿನಗಳ ಪ್ರವಾಸ ಆ.29ಕ್ಕೆ ಆರಂಭಗೊಳ್ಳಲಿದ್ದು, ರೂ. 34,200 ದರ ಇರಲಿದೆ.

Ganga Aarti Places In India,भारत के इन शहरों में मशहूर हैं गंगा आरती,  इन्हें देखने भर से ही थका हुआ शरीर भी हो जाता है तरोताजा - ganga aarti  places in indiaಸೆಪ್ಟೆಂಬರ್‌ 3ಕ್ಕೆ ಆರಂಭವಾಗುವ 13 ದಿನಗಳ ಚಾರ್ ಧಾಮ್ ಯಾತ್ರೆಯಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದ್ರಿನಾಥ, ದೇವಪ್ರಯಾಗ ಮತ್ತು ರಿಷಿಕೇಶಕ್ಕೆ ಭೇಟಿ ಇರಲಿದ್ದು, ರೂ.60,950 ದರ ನಿಗದಿ ಮಾಡಲಾಗಿದೆ.

Kedarnath - DAIWIK HOTELS ಈ ಪ್ರವಾಸಗಳು ವಿಮಾನ ಟಿಕೆಟ್‌, ವಸತಿ, ಅಗತ್ಯ ಇರುವಲ್ಲಿ ವಾಹನ, ಅಲ್ಲದೇ ಆಹಾರ, ಪ್ರಯಾಣ ವಿಮೆ ಮತ್ತು ಅನ್ವಯವಾಗುವ ತೆರಿಗೆಗಳು ಒಳಗೊಂಡಿವೆ ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.

ಇದನ್ನೂ ಓದಿ