February 9, 2026
Monday, February 9, 2026
spot_img

ಐಆರ್‌ಸಿಟಿಸಿಯಿಂದ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಪ್ಯಾಕೇಜ್ ಆರಂಭ, ನೀವೂ ಹೋಗಿಬನ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಆರ್‌ಸಿಟಿಸಿಯು ತನ್ನ ಪ್ರತಿಷ್ಠಿತ ‘ಭಾರತ್ ಗೌರವ್’ ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ಪೂರ್ವ ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ 10 ದಿನಗಳ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ (Divine East Temple Tour) ಅನ್ನು ಪ್ರಾರಂಭಿಸಿದೆ.

ಎಲ್ಲೆಲ್ಲಿಗೆ ಪ್ರವಾಸ?

ಈ ರೈಲು ಆಧಾರಿತ ಪ್ರವಾಸ ಪ್ಯಾಕೇಜ್ ಮೂಲಕ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ ತಾಣಗಳಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಭೇಟಿ ನೀಡುವ ಅಪೂರ್ವ ಅವಕಾಶ ಲಭಿಸುತ್ತದೆ.

ಈ ಯಾತ್ರೆಯು ದೆಹಲಿ ಸಫ್ದರ್ಜಂಗ್ ನಿಲ್ದಾಣದಿಂದ ಆರಂಭವಾಗಿ, ವಾರಾಣಸಿ, ಕೊಲ್ಕತ್ತಾ, ಗಂಗಾಸಾಗರ, ಪುರಿ, ಭುವನೇಶ್ವರ, ಕೊನಾರ್ಕ್, ಚಿಲಿಕಾ ಮತ್ತು ಬೈದ್ಯನಾಥ ಧಾಮ (ದಿಯೋಘರ್)ವರೆಗೂ ತಲುಪಿ ಮತ್ತೆ ದೆಹಲಿಗೆ ಮರಳಲಿದೆ. 9 ರಾತ್ರಿ ಮತ್ತು 10 ದಿನಗಳ ಈ ಪ್ರವಾಸವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ಹಾಗೂ ಸಾಂಸ್ಕೃತಿಕ ಅರಿವು ಮೂಡಿಸಲಿದೆ.

ಏನೆಲ್ಲಾ ಫೆಸಿಲಿಟಿಸ್‌?

ಭಾರತ್ ಗೌರವ್ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ. ಎಸಿ I, ಎಸಿ II ಮತ್ತು ಎಸಿ III ದರ್ಜೆಯ ಕ್ಯಾಬಿನ್‌ಗಳು, ಸ್ವಚ್ಛ ಮತ್ತು ರುಚಿಕರವಾದ ಸಸ್ಯಾಹಾರ ಭೋಜನದ ವ್ಯವಸ್ಥೆ, ಪ್ರವಾಸದ ಉದ್ದಕ್ಕೂ ಮಾರ್ಗದರ್ಶನ ನೀಡಲು ವಿಶೇಷ ಟೂರ್ ಮ್ಯಾನೇಜರ್‌ಗಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸುಧಾರಿತ ಸೆಕ್ಯೂರಿಟಿ ಫೀಚರ್‌ಗಳು ಈ ರೈಲಿನಲ್ಲಿ ಸಿಗಲಿವೆ.

ದುಡ್ಡೆಷ್ಟು?

ದರ ಮತ್ತು ಬುಕ್ಕಿಂಗ್ ವಿವರಗಳು
AC I ಕ್ಲಾಸ್: ಒಬ್ಬರಿಗೆ ₹ 1,06,940
AC II ಕ್ಲಾಸ್: ಒಬ್ಬರಿಗೆ ₹ 98,925
AC III ಕ್ಲಾಸ್: ಒಬ್ಬರಿಗೆ ₹ 79,285

ಪ್ಯಾಕೇಜ್‌ನಲ್ಲಿ ಏನೇನಿದೆ?
ಈ ಪ್ಯಾಕೇಜ್ ದರದಲ್ಲಿ ಎಸಿ ರೈಲು ಪ್ರಯಾಣ, ಎಸಿ ಹೋಟೆಲ್ ವಸತಿ, ಎಲ್ಲಾ ಸಸ್ಯಾಹಾರಿ ಊಟಗಳು, ಎಸಿ ವಾಹನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಪ್ರಯಾಣ ವಿಮೆ ಹಾಗೂ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಒಳಗೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !