Monday, October 27, 2025

ಮತದಾರರ ಪಟ್ಟಿ ಪರಿಷ್ಕರಣೆ ಸಮಯ ಆಧಾರ್ ಕಾರ್ಡ್ ಕಡ್ಡಾಯವೇ? ಚುನಾವಣಾ ಆಯೋಗ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 28ರಿಂದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಾರಂಭವಾಗುತ್ತಿದ್ದು, ಈ ಕುರಿತಾಗಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ನೀಡುವ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಎಸ್​ಐಆರ್ ಪ್ರಕ್ರಿಯೆಗೆ 11 ದಾಖಲೆಗಳನ್ನು ನೀಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಪ್ಯಾನ್-ಇಂಡಿಯಾ ವಿಶೇಷ ಪರಿಷ್ಕರಣೆ (SIR) ಅನ್ನು ಘೋಷಿಸಿದರು. ಎಸ್​ಐಆರ್ 2026ರ ಫೆಬ್ರವರಿ 7ರಂದು ಮುಕ್ತಾಯಗೊಳ್ಳಲಿದೆ.

“ಆಧಾರ್ ಕಾರ್ಡ್ ಜನ್ಮ ದಿನಾಂಕ ಅಥವಾ ವಾಸದ ಪುರಾವೆಯಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. “ಆಧಾರ್ ಪೌರತ್ವದ ಪುರಾವೆಯಲ್ಲ, ಆದರೆ SIR ಪ್ರಕ್ರಿಯೆಯಲ್ಲಿ ಗುರುತಿನ ಪುರಾವೆಯಾಗಿ ಅದನ್ನು ನೀಡಬಹುದು” ಎಂದು ಅವರು ತಿಳಿಸಿದ್ದಾರೆ.

SIRನ ಎರಡನೇ ಹಂತ ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ.

error: Content is protected !!