April 8, 2026
Wednesday, April 8, 2026
spot_img

ಮನೆಗಳಿಗೆ ಪ್ರೀಪೇಯ್ಡ್​ ವಿದ್ಯುತ್ ಮೀಟರ್‌ ಅಳವಡಿಕೆ ಕಡ್ಡಾಯವೇ?: ಕೇಂದ್ರ ಸರಕಾರ ಕೊಟ್ಟ ಉತ್ತರವೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಪ್ರೀಪೇಯ್ಡ್​ ವಿದ್ಯುತ್​ ಮೀಟರ್​ ​ಗಳನ್ನು ಕಡ್ಡಾಯ ಅಳವಡಿಸಿಕೊಳ್ಳಬೇಕು ಎಂಬ ಊಹಾಪೋಹಗಳನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ.

ಈ ಕುರಿತು ಲೋಕಸಭೆಯಲ್ಲಿ ಇಂದು ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದು, ಜನರಿಗೆ ಪ್ರೀಪೇಯ್ಡ್​ ಮೀಟರ್‌ಗಳನ್ನು ಅಳವಡಿಸಿಕೊಳ್ಳಲು ಸರಕಾರ ಸೂಚಿಸಿಲ್ಲ. ಈ ಕುರಿತು ಕೇವಲ ಗಾಳಿ ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ವಿದ್ಯುತ್​ ಕಂಪನಿಗಳು ಇಂತಹ ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ಯಾವುದೇ ಆತಂಕಬೇಡ. ಸಾಮಾನ್ಯವಾಗಿ ಕೆಲವು ಗ್ರಾಹಕರು ವಿದ್ಯುತ್​ ಬಳಕೆ ಮಾಡಿ ಶುಲ್ಕ ಪಾವತಿ ಮಾಡಲ್ಲ. ಅಂತಹ ಸಂದರ್ಭದಲ್ಲಿ ಹಣ ಪಾವತಿ ಮಾಡಲು ಪ್ರೀಪೇಯ್ಡ್​​ ಮೀಟರ್​ ವಿಧಾನವು ಉತ್ತಮವಾಗಿದೆ ಎಂದು ತಿಳಿಸಿದರು.

ಪ್ರೀಪೇಯ್ಡ್​ ಮೀಟರ್​ ಪ್ರಯೋಜನೆ ಏನು?
ವಾಣಿಜ್ಯ,ಕೈಗಾರಿಕೆ, ಗೃಹ ಬಳಕೆ ಸೇರಿದಂತೆ ಎಲ್ಲ ಬಗೆಯ ವಿದ್ಯುತ್ ಸಂಪರ್ಕಗಳಿಗೆ ಪ್ರೀಪೇಯ್ಡ್​ ಮೀಟರ್​ ಅಳವಡಿಸುಕೊಳ್ಳುತ್ತಾರೆ. ಇದರಿಂದ ತಾವು ವಿದ್ಯುತ್​ ಬಳಕೆ ಮಾಡುವ ಮೊದಲು ಮೊದಲೇ ಹಣವನ್ನು ಪಾವತಿಸಬೇಕು. ಇಲ್ಲಿ ಮೊಬೈಲ್​ ಫೋನ್​ಗಳ ಮಾದರಿಯಲ್ಲಿ ಪ್ರೀಪೇಯ್ಡ್​ ರೀಚಾರ್ಜ್ ಇರಲಿದ್ದು, ಗ್ರಾಹಕರು ತಮ್ಮ ಅಗತ್ಯ ಮತ್ತು ಬಳಕೆಗೆ ಅನುಸಾರವಾಗಿ ಹಣವನ್ನು ರೀಚಾರ್ಜ್​ ಮಾಡಲು ಅವಕಾಶವಿದೆ .

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !