April 8, 2026
Wednesday, April 8, 2026
spot_img

ರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಸರಿಯೇ? ಕೇರಳ ಹೈಕೋರ್ಟ್ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ತಿಗೊಳಿಸದೆ ತಲಪಾಡಿ – ಚೆಂಗಳ ಪ್ರಥಮ ರೀಚ್ ರಾಷ್ಟ್ರೀಯ ಹೆದ್ದಾರಿ ೬೬ರ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸುವುದು ಸರಿಯೇ ಮತ್ತು ಹೇಗೆಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

ಕ್ರಿಯಾ ಸಮಿತಿಯ ಸಂಚಾಲಕ ಅಶ್ರ- ಕಾರ್ಲೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ಈ ಪ್ರಶ್ನೆಯನ್ನು ಮುಂದಿರಿಸಿದೆ. ಇದೇ ವೇಳೆ ಟೋಲ್ ಸಂಗ್ರಹ ವಿಚಾರದಲ್ಲಿ ಆಯೋಗವೊಂದನ್ನು ನೇಮಿಸಬೇಕೆಂದು ಕ್ರಿಯಾ ಸಮಿತಿಯು ಮುಂದಿರಿಸಿದ್ದ ವಾದವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಪರವಾಗಿ ಹಾಜರಿದ್ದ ವಕೀಲರು ಪ್ರಬಲವಾಗಿ ವಿರೋಧಿಸಿದರು.

ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ಅಧ್ಯಕ್ಷರಾಗಿರುವ ಏಕ ಸದಸ್ಯ ಪೀಠವು ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡಿತು. ಅರ್ಜಿಯ ಮೇಲೆ ಸಮಗ್ರ ವಾದ ಪ್ರತಿವಾದ ಆಲಿಸುವಿಕೆಯನ್ನು ಉಚ್ಚ ನ್ಯಾಯಾಲಯವು ಜ.೨೮ಕ್ಕೆ ಮುಂದೂಡಿದೆ.

ಇದೇ ವೇಳೆ ಪ್ರಸ್ತುತವಿರುವ ರಸ್ತೆ ನಿರ್ಮಾಣ ಲೋಪದೋಷಗಳನ್ನು ಪರಿಹರಿಸದೆ ಟೋಲ್ ಸಂಗ್ರಹಿಸುವುದು ಜನರೊಂದಿಗೆ ತೋರುವ ಸವಾಲಾಗಿದೆ ಎಂದು ಕ್ರಿಯಾ ಸಮಿತಿಯು ಆರೋಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !