February 11, 2026
Wednesday, February 11, 2026
spot_img

ಜೀವನ ‘Dull’ ಹೊಡಿತಿದ್ಯಾ? ಬದುಕಿನ ಬಣ್ಣ ಬದಲಿಸಲು ಇಲ್ಲಿವೆ ಸೂಪರ್ ಐಡಿಯಾ!

ಜೀವನ ಒಮ್ಮೊಮ್ಮೆ “ರಿಪೀಟ್ ಮೋಡ್” ನಲ್ಲಿದ್ದಂತೆ ಅನಿಸುವುದು ಸಹಜ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಎಲ್ಲವೂ ಒಂದೇ ರೀತಿ ಎನಿಸಿದಾಗ ಮನಸ್ಸು ಬೇಸರಗೊಳ್ಳುತ್ತದೆ. ಈ ‘ಬೋರಿಂಗ್’ ಜಾಲದಿಂದ ಹೊರಬರಲು ಇಲ್ಲಿವೆ ಕೆಲವು ಕ್ರಿಯೇಟಿವ್ ಐಡಿಯಾಗಳು:

ಎಂದೂ ಮಾಡದ ಕೆಲಸಕ್ಕೆ ಕೈಹಾಕಿ. ಅದು ಅಡುಗೆ ಇರಬಹುದು, ಗಿಟಾರ್ ನುಡಿಸುವುದಿರಬಹುದು ಅಥವಾ ಒಂದು ಸಣ್ಣ ಕವಿತೆ ಬರೆಯುವುದಿರಬಹುದು. ಹೊಸತನ್ನು ಕಲಿಯುವಾಗ ಮೆದುಳು ಚುರುಕಾಗುತ್ತದೆ.

ದೊಡ್ಡ ಟ್ರಿಪ್ ಬೇಡ, ನಿಮ್ಮೂರಿನ ಪಕ್ಕದ ಸಣ್ಣ ಹಳ್ಳಿ ಅಥವಾ ಸುಂದರ ಪಾರ್ಕ್‌ಗೆ ಭೇಟಿ ನೀಡಿ. ಜಾಗ ಬದಲಾದರೆ ಮನಸ್ಥಿತಿಯೂ ಬದಲಾಗುತ್ತದೆ.

ಮೊಬೈಲ್ ಪಕ್ಕಕ್ಕಿಟ್ಟು ಒಂದು ಗಂಟೆ ಪುಸ್ತಕ ಓದಿ ಅಥವಾ ಪ್ರಕೃತಿಯನ್ನು ಗಮನಿಸಿ. ಸ್ಕ್ರೀನ್ ನೋಡಿ ಸುಸ್ತಾದ ಕಣ್ಣುಗಳಿಗೆ ಅದು ನೆಮ್ಮದಿ ನೀಡುತ್ತದೆ.

ನಿಮ್ಮ ರೂಮಿನ ಸೆಟ್ಟಿಂಗ್ ಬದಲಾಯಿಸಿ ಅಥವಾ ದಾರಿಯಲ್ಲಿ ಹೋಗುವಾಗ ಪರಿಚಯವಿಲ್ಲದವರಿಗೂ ಒಂದು ಸಣ್ಣ ಸ್ಮೈಲ್ ನೀಡಿ. ಈ ಸಣ್ಣ ಬದಲಾವಣೆಗಳು ದಿನಕ್ಕೆ ಹೊಸ ಕಳೆ ತರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !