March 23, 2026
Monday, March 23, 2026
spot_img

ಎತ್ತ ಸಾಗುತ್ತಿದೆ ಸಮಾಜ? ಆಟವಾಡಬೇಕಾದ ವಯಸ್ಸಿನಲ್ಲಿ ಅತ್ಯಾಚಾರದ ಆಘಾತ: ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ವೈಜಾಗ್‌ನಲ್ಲಿ ಹಸಿವಿನ ಆಮಿಷವೊಡ್ಡಿ ಮೂರು ವಯಸ್ಸಿನ ಪುಟ್ಟ ಕಂದಮ್ಮನ ಮೇಲೆ 19 ವರ್ಷದ ಹರೆಯದವನೊಬ್ಬ ಅತ್ಯಾಚಾರವೆಸಗಿದ ಘನಘೋರ ಕೃತ್ಯ ಜರುಗಿದೆ. ಸಿಹಿ ತಿಂಡಿಯ ಆಮಿಷವೊಡ್ಡಿ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ನೀಚ ಕೃತ್ಯ ಎಸಗಲಾಗಿದೆ.

ಮಗುವಿನ ಅಳು ಕಂಡು ಸಂಶಯಗೊಂಡ ತಾಯಿ ವಿಚಾರಿಸಿದಾಗ ಘೋರ ಸತ್ಯ ಬಯಲಾಗಿದೆ. ತಕ್ಷಣವೇ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಈ ಘಟನೆಯನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಆಯೋಗದ ಅಧ್ಯಕ್ಷೆ ರಾಯಪತಿ ಶೈಲಜಾ ಅವರು ನಗರ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಇಂತಹ ಕೃತ್ಯಗಳು ನಾಗರಿಕ ಸಮಾಜಕ್ಕೆ ದೊಡ್ಡ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !