Thursday, December 4, 2025

Kitchen tips | ನೀವು ಬಳಸೋ ಜೀರಿಗೆ ಅಸಲಿಯೋ? ನಕಲಿಯೋ?: ಒಂದೇ ನಿಮಿಷದಲ್ಲಿ ಪತ್ತೆ ಮಾಡಿ!

ಅಡುಗೆಯಲ್ಲಿ ಒಂದಿಷ್ಟು ಜೀರಿಗೆ ಹಾಕಿದರೆ ಸಾಕು, ಆಹಾರಕ್ಕೆ ಅತೀ ವಿಶೇಷವಾದ ರುಚಿ ಮತ್ತು ಸುವಾಸನೆ ಬರುತ್ತೆ. ಜೀರಿಗೆ ಕೇವಲ ರುಚಿಗಾಗಿ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು, ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹ ಬಹಳ ಉಪಯುಕ್ತ. ಆದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಜೀರಿಗೆ ಹೆಚ್ಚಾಗಿ ದೊರೆಯುತ್ತಿರುವುದು ಆತಂಕಕಾರಿ ವಿಷಯ. ಇವುಗಳಲ್ಲಿ ಹುಲ್ಲಿನ ಬೀಜ, ಮರದ ಪುಡಿ, ಬಣ್ಣ ಹಚ್ಚಿದ ಕಾಳುಗಳನ್ನು ಬೆರೆಸಿ ಅಸಲಿಯಂತೆ ಮಾರಾಟ ಮಾಡಲಾಗುತ್ತದೆ. ದಿನವೂ ಅದನ್ನೇ ಬಳಸುವುದರಿಂದ ಆರೋಗ್ಯ ನಿಧಾನವಾಗಿ ಹಾನಿಯಾಗಬಹುದು. ಆದ್ದರಿಂದ ಮನೆಯಲ್ಲೇ ಸುಲಭವಾಗಿ ಜೀರಿಗೆ ಅಸಲಿ ಅಥವಾ ನಕಲಿ ಎಂದು ಗುರುತಿಸುವುದು ಬಹಳ ಮುಖ್ಯ.

ಅಸಲಿ ಜೀರಿಗೆ ಗುರುತಿಸುವ ಲಕ್ಷಣಗಳು:
ಅಸಲಿ ಜೀರಿಗೆ ತಿಳಿಯಿಂದ ಗಾಢ ಕಂದು ಬಣ್ಣದಲ್ಲಿದ್ದು, ಸ್ವಲ್ಪ ಬಾಗಿದ ಆಕಾರದಲ್ಲಿರುತ್ತದೆ. ಕೈಯಲ್ಲಿ ಉಜ್ಜಿದಾಗ ತೀಕ್ಷ್ಣವಾದ ಸಹಜ ಸುವಾಸನೆ ಬರುತ್ತದೆ. ನಕಲಿ ಜೀರಿಗೆ ಸಾಮಾನ್ಯವಾಗಿ ತುಂಬಾ ಹಗುರವಾಗಿರುತ್ತದೆ ಹಾಗೂ ಅದರ ವಾಸನೆ ಮಂಕಾಗಿರುತ್ತದೆ ಅಥವಾ ರಾಸಾಯನಿಕದಂತೆ ಇರುತ್ತದೆ.

  • ನೀರಿನ ಪರೀಕ್ಷೆ: ಒಂದು ಗ್ಲಾಸ್ ನೀರಿಗೆ ಸ್ವಲ್ಪ ಜೀರಿಗೆ ಹಾಕಿ. ಅಸಲಿ ಜೀರಿಗೆ ಕೆಳಗೆ ಕುಳಿತರೆ, ನಕಲಿ ಜೀರಿಗೆ ಮೇಲೆಯೇ ತೇಲುತ್ತದೆ. ನೀರಿಗೆ ಬಣ್ಣ ಬಿಡುತ್ತಿದ್ದರೆ ಅದು ಹೆಚ್ಚುವರಿ ರಾಸಾಯನಿಕ ಬಳಕೆಯ ಸೂಚನೆ.
  • ಕಲಬೆರಕೆ ಜೀರಿಗೆ ಅಪಾಯ: ನಕಲಿ ಜೀರಿಗೆ ದೀರ್ಘಕಾಲ ಸೇವಿಸಿದರೆ ಹೊಟ್ಟೆ ನೋವು, ಗ್ಯಾಸ್, ಅಸಿಡಿಟಿ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು.

ಆದ್ದರಿಂದ ಮಸಾಲೆ ಖರೀದಿಸುವಾಗ ಸದಾ ಎಚ್ಚರಿಕೆಯಿಂದಿರಿ, ವಿಶ್ವಾಸಾರ್ಹ ಅಂಗಡಿಗಳಿಂದಲೇ ಜೀರಿಗೆ ತೆಗೆದುಕೊಳ್ಳಿ ಮತ್ತು ಮನೆಯಲ್ಲಿ ಈ ಸರಳ ಪರೀಕ್ಷೆಗಳನ್ನು ಮಾಡಿ ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ.

error: Content is protected !!