Sunday, November 9, 2025

FOOD TEST | ಅಂಗಡಿಯಿಂದ ತಂದ ಸಿಹಿಬೆಲ್ಲ ಅಸಲಿಯೋ? ನಕಲಿಯೋ? ಹೀಗೆ ಪರೀಕ್ಷಿಸಿ

ಗುಣಮಟ್ಟದ ಬೆಲ್ಲವನ್ನು ಗುರುತಿಸಲು ಕೆಲವು ಸುಲಭವಾದ ಟ್ರಿಕ್ಸ್ ಇವೆ. ತುಂಬಾ ಸರಳವಾಗಿ ನೀರಿನ ಪರೀಕ್ಷೆ ಮಾಡಬಹುದು.

ಒಂದು ಲೋಟ ನೀರಿನಲ್ಲಿ ಸ್ವಲ್ಪ ಬೆಲ್ಲ ಹಾಕಿ. ನಿಜವಾದ ಬೆಲ್ಲ ತಳಕ್ಕೆ ಹೋಗಿ ತಲುಪುತ್ತದೆ. ಆದರೆ, ನಕಲಿ ಬೆಲ್ಲವು ಮೇಲಕ್ಕೆ ತೇಲುತ್ತದೆ. ನಿಜವಾದ ಬೆಲ್ಲವು ಹೆಚ್ಚಿನ ಶುದ್ಧತೆ ಹಾಗೂ ಸಾಂದ್ರತೆಯನ್ನು ಹೊಂದಿರುತ್ತದೆ. ಅಲ್ಲದೇ ನಕಲಿ ಬೆಲ್ಲವು ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳನ್ನು ಹೊಂದಿರುತ್ತದೆ. ಇವು ಅದನ್ನು ಹಗುರಗೊಳಿಸುತ್ತವೆ.

ಬೆಲ್ಲದಲ್ಲಿ ಕಲಬೆರಕೆಯನ್ನು ಪತ್ತೆಹಚ್ಚಲು ಮತ್ತೊಂದು ಸುಲಭ ಮಾರ್ಗವೆಂದರೆ ವಾಸನೆಯ ಮೂಲಕ ಕಂಡುಹಿಡಿಬಹುದು. ನಿಜವಾದ ಬೆಲ್ಲವು ಸೌಮ್ಯವಾದ, ನೈಸರ್ಗಿಕ ಸಿಹಿ ವಾಸನೆ ಹೊಂದಿರುತ್ತದೆ. ನಕಲಿ ಬೆಲ್ಲವು ರಾಸಾಯನಿಕ ವಾಸನೆ ಹೊಂದಿರುತ್ತದೆ.

ನಿಜವಾದ ಬೆಲ್ಲವು ಸಿಹಿ ಹಾಗೂ ನಯವಾದ ರುಚಿಯನ್ನು ಹೊಂದಿರುತ್ತದೆ. ಆದರೆ, ನಕಲಿ ಬೆಲ್ಲವು ಸ್ವಲ್ಪ ಕಹಿ ಹಾಗೂ ಒರಟಾಗಿರುತ್ತದೆ. ನಿಜವಾದ ಬೆಲ್ಲವು ತಿಳಿ ಕಂದು, ಚಿನ್ನದ ಬಣ್ಣವನ್ನು ಹೊಂದಿರುತ್ತದೆ. ಆದರೆ, ನಕಲಿ ಬೆಲ್ಲವು ಹೊಳೆಯುತ್ತದೆ, ಗಾಢ ಕೆಂಪು ಬಣ್ಣದಲ್ಲಿ ಕಾಣುತ್ತದೆ.

ಬೆಲ್ಲವನ್ನು ಖರೀದಿಸುವಾಗ ತುಂಡುಗಳ ಮೇಲಿನ ಪದರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ. ನಿಜವಾದ ಬೆಲ್ಲವು ಸ್ವಲ್ಪ ಧಾನ್ಯದ, ನೈಸರ್ಗಿಕ ಮೇಲ್ಮೈಯನ್ನು ಹೊಂದಿರುತ್ತದೆ. ನಕಲಿ ಬೆಲ್ಲವು ಮೃದು ಮತ್ತು ಹೊಳೆಯುವಂತೆ ಕಾಣುತ್ತದೆ.

ಬೆಲ್ಲವನ್ನು ಆಕರ್ಷಕವಾಗಿಸಲು ರಾಸಾಯನಿಕಗಳು, ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಅಂತಹ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆ ನೋವು, ತಲೆನೋವು ಇಲ್ಲವೇ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಕಲಬೆರಕೆ ಬೆಲ್ಲವನ್ನು ಪತ್ತೆಹಚ್ಚುವುದು ಅತ್ಯಗತ್ಯವಾಗಿದೆ.

    error: Content is protected !!