ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಾಹಂ ತಮ್ಮ ಫಿಟ್ ದೇಹದಿಂದಲೇ ಫೇಮಸ್. ನಟ ಸದಾ ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಾರೆ. ಇದೀಗ ಜಾನ್ ಅವರ ಹೊಸ ಫೋಟೊಗಳು ವೈರಲ್ ಆಗಿವೆ.
ಫೋಟೊಗಳನ್ನು ನೋಡಿದ ಜನ ಜಾನ್‌ನ ಆರೋಗ್ಯ ಹೇಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆಗಲೂ ಫಿಟ್ ಇದ್ದ ಜಾನ್ ಈಗ ಅದಕ್ಕಿಂತ ಹೆಚ್ಚು ಫಿಟ್ ಆಗಿದ್ದಾರೆ.
ಇದನ್ನೂ ಓದಿ: FOOD | ವಾರಕ್ಕೊಮ್ಮೆಯಾದ್ರೂ ತಿನ್ನಿ ಮೊಳಕೆ ಹುರುಳಿಕಾಳು, ಟೇಸ್ಟಿ ಸಾಂಬಾರ್ ಮಾಡ್ಬೋದು ನೋಡಿ..
ಜಾನ್ ಅಬ್ರಾಹಂ ಅವರು ಇತ್ತೀಚೆಗೆ ತಮ್ಮ ತಂಡದ ಸದಸ್ಯರ ಜೊತೆ ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೊದಲು ಕಟ್ಟುಮಸ್ತಾಗಿದ್ದ ಅವರು ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಕ್ಲೀನ್ ಶೇವ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಮುಖ ಸಂಪೂರ್ಣ ಬಾಡಿಹೋದಂತೆ ಕಾಣಿಸಿದೆ. ಇದರಿಂದ ಅಭಿಮಾನಿಗಳಿಗೆ ಚಿಂತೆ ಆಗಿದೆ.



