ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ರಷ್ಯಾದ ಹಿರಿಯ ಜನರಲ್ ಸಾವನ್ನಪ್ಪಿದ್ದಾರೆ. ಇದರ ಬೆನ್ನೆಲ್ಲೆ ರಷ್ಯಾದ ಜನರಲ್ ಕಾರಿನ ಕೆಳಗೆ ಸ್ಫೋಟಕಗಳನ್ನು ಇರಿಸಲಾಗಿದ್ದು, ಇದು ಪ್ರಬಲ ಸ್ಫೋಟಕ್ಕೆ ಕಾರಣ ಎಂದು ತನಿಖೆಗಳು ಬಹಿರಂಗಪಡಿಸಿವೆ.
ಇದೀಗ ರಷ್ಯಾದ ತನಿಖಾ ಸಮಿತಿಯ ಆರಂಭಿಕ ತನಿಖೆಯಲ್ಲಿ ಸ್ಫೋಟದಲ್ಲಿ ಉಕ್ರೇನ್ ಕೈವಾಡವಿರುವ ಬಗ್ಗೆ ಶಂಕಿಸಲಾಗಿದೆ. ಫೆಬ್ರವರಿ 2022ರಲ್ಲಿ ಮಾಸ್ಕೋ ಉಕ್ರೇನ್‌ಗೆ ಸೈನ್ಯವನ್ನು ನುಗ್ಗಿಸಿದ್ದರಿಂದಾಗಿ ರಷ್ಯಾ ಮತ್ತು ರಷ್ಯಾ ನಿಯಂತ್ರಿತ ಉಕ್ರೇನಿಯನ್ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಅಧಿಕಾರಿಗಳ ಮೇಲಿನ ದಾಳಿಗಳಿಗೆ ಕೈವ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ದೀರ್ಘಕಾಲದ ಯುದ್ಧವು ಎರಡೂ ದೇಶಗಳ ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ರಷ್ಯಾದಲ್ಲಿ ಈ ಹಿಂದೆ ಹಲವಾರು ಬಾಂಬ್ ಸ್ಫೋಟಗಳು ಸಂಭವಿಸಿವೆ. ಏಪ್ರಿಲ್ 2025 ರಲ್ಲಿ, ಜನರಲ್ ಸ್ಟಾಫ್‌ನ ಉಪ ಮುಖ್ಯಸ್ಥ ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಕಾರ್ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದರು.

