March 31, 2026
Tuesday, March 31, 2026
spot_img

ತಂಗಿ- ಭಾವನ ಸಾವಿನ ನೋವಲ್ಲೂ ಟೀಂ ಇಂಡಿಯಾ ಗೆಲ್ಲಿಸಿದ ಇಶಾನ್‌ ಕಿಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಂಗಿ ಹಾಗೂ ಭಾವನ ಸಾವಿನ ನೋವಲ್ಲೂ ಇಶಾನ್‌ ಕಿಶನ್‌ ಟೀಂ ಇಂಡಿಯಾ ಗೆಲ್ಲಿಸೋದ್ರಲ್ಲಿ ಪಾಲು ಪಡೆದಿದ್ದಾರೆ, ಅಭಿಮಾನಿಗಳಿಗೆ ಗೆಲುವಿನ ಸಂಭ್ರಮ ನೀಡಿದ್ದಾರೆ.

ಇನ್ನೇನು ಟಿ20 ವಿಶ್ವಕಪ್‌ ಫೈನಲ್‌ಗೆ ಎರಡೇ ದಿನ ಬಾಕಿ ಇರುವಂತೆ ಇಶಾನ್‌ ಕಿಶನ್‌ ಭಾವ ಹಾಗೂ ಕಸಿನ್‌ ಸಿಸ್ಟರ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ಇರಬೇಕು ಎಂದು ಇಶಾನ್‌ ಬಯಸಿದ್ದರೂ ದೇಶದ ಬಗೆಗಿನ ಕರ್ತವ್ಯ ಅರಿತು ಮ್ಯಾಚ್‌ ಆಡಿದ್ದಾರೆ. ಇಶಾನ್‌ ಇಡೀ ಮ್ಯಾಚ್‌ನಲ್ಲಿ ಎಲ್ಲಿಯೂ ಖುಷಿಯಾಗಿರುವುದು ಕಂಡುಬಂದಿಲ್ಲ. ಇಡೀ ಕ್ರಿಕೆಟ್‌ ಕುಟುಂಬ ಕಿಶನ್‌ಗೆ ಧೈರ್ಯ ತುಂಬಿತ್ತು.

ಕಿಶನ್‌ ಸಹೋದರಿ ಹಾಗೂ ಅವರ ಪತಿಯನ್ನು ಕಳೆದುಕೊಂಡು ನಾವೆಲ್ಲರೂ ಆಘಾತಕ್ಕೆ ಒಳಗಾಗಿದ್ದೆವು. ಇಶಾನ್ ನಮ್ಮನ್ನು ಭೇಟಿ ಮಾಡಲು ಬಯಸಿದ್ದರು. ಆದರೆ, ಫೈನಲ್ ಪಂದ್ಯದ ಕಾರಣ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಪುತ್ರ ಕೂಡ ದಿಗ್ಭ್ರಮೆಗೊಂಡಿದ್ದ ಎಂದು ಕಿಶನ್‌ ತಂದೆ ಪ್ರಣವ್ ಪಾಂಡೆ ಮಾತನಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !