ತಿರುವನಂತಪುರದಲ್ಲಿ ಶನಿವಾರ ನಡೆದ 5 ಟಿ20 ಪಂದ್ಯದಲ್ಲಿ ಇಶಾನ್ ಕಿಶಾನ್ ಕೇವಲ 42 ಎಸೆತದಲ್ಲಿ ಶತಕ ಗಳಿಸಿದ ಅವರು ನ್ಯೂಜಿಲೆಂಡ್ ತಂಡದ ಬೌಲಿಂಗ್ ಅನ್ನು ಧೂಳೀಪಟ ಮಾಡಿದರು.
ಇದರಿಂದ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್ ಗಳ ಬೃಹತ್ ಮೊತ್ತ ಸೇರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಆರಂಭದಿಂದಲೇ ನ್ಯೂಜಿಲೆಂಡ್ ವಿರುದ್ಧ ಸವಾರಿ ನಡೆಸಿತು. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಓವರ್ ಗೆ ಹತ್ತು ರನ್ ನಂತ ಗಳಿಸುತ್ತಿದ್ದರು. ಆದರೆ 3ನೇ ಓವರ್ ನಲ್ಲಿ ತಂಡದ ಮೊತ್ತ 31 ಆಗಿದ್ದಾಗ ಲೋಕಲ್ ಬಾಯ್ ಸಂಜು ಸ್ಯಾಮ್ಸನ್(6 ರನ್) ಅವರು ವೇಗಿ ಲೋಕಿ ಫರ್ಗ್ಯುಸನ್ ಬೌಲಿಂಗ್ ನಲ್ಲಿ ತಪ್ಪಾಗಿ ಹೊಡೆದ ಹೊಡೆತ ನೇರವಾಗಿ ಬೆವೆನ್ ಜಾಕೋಬ್ಸ್ ಕೈ ಸೇರಿತು.
ಸಂಜು ಸ್ಯಾಮ್ಸನ್ ಔಟಾಗಿ 17 ರನ್ ಗಳಾಗುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ(16 ಎಸತೆದಲ್ಲಿ 30 ರನ್) ಫರ್ಗ್ಯುಸನ್ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರು ಆಡಿದ್ದೇ ಆಟ ಎಂಬಂತಾಯಿತು. ಇವರಿಬ್ಬರು 3ನೇ ವಿಕೆಟ್ ಗೆ ಮಹತ್ವದ 137 ರನ್ ಗಳ ಜೊತೆಯಾಟವಾಡಿದರು.
ಸೂರ್ಯ ಕುಮಾರ್ ಯಾದವ್ 63 ರನ್ ಗೆ ಸ್ಟಂಪ್ ಔಟ್ ಆದರು. ನಾಯಕನ ಪತನದ ಬಳಿಕ ಭಾರತ 15.4 ಓವರ್ ಗಳಲ್ಲಿ 200ರ ಗಡಿ ದಾಟಿತು. ಇಶಾನ್ ಕಿಶನ್ ಅವರು ಕೇವಲ 42 ಎಸೆತಗಳಲ್ಲಿ ಚೊಚ್ಚಲ ಟಿ20 ಶತಕ ಪೂರೈಸಿಕೊಂಡರು. ಅಂತಿಮವಾಗಿ 43 ಎಸತೆದಿಂದ 103 ರನ್ ಗಳಿ ಔಟಾದ ಅವರ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್ ಗಳಿದ್ದವು. ಈ ವಿಕೆಟ್ ಪತನದ ಬಳಿಕ ಹಾರ್ದಿಕ್ ಪಾಂಡ್ಯ ಅವರು ಕೇವಲ 17 ಎಸೆತಗಳಿಂದ 4 ಸಿಕ್ಸರ್ ಗಳಿದ್ದ 42 ರನ್ ಗಳಿಸಿದರು.



