Friday, October 31, 2025

ಪೂರ್ವ ಕಾಂಗೋದಲ್ಲಿ ಚರ್ಚ್ ಮೇಲೆ IS ಬೆಂಬಲಿತ ಉಗ್ರರ ದಾಳಿ: 21 ಮಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಕಾಂಗೋದಲ್ಲಿನ ಚರ್ಚ್ ಮೇಲೆ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದು, ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.

ಪೂರ್ವ ಕಾಂಗೋದ ಕೊಮಾಂಡಾದಲ್ಲಿರುವ ಕ್ಯಾಥೋಲಿಕ್ ಚರ್ಚ್‌ನ ಆವರಣದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅಲೈಡ್ ಡೆಮಾಕ್ರಟಿಕ್ ಫೋರ್ಸ್ (ADF) ಉಗ್ರರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ಹಲವಾರು ಮನೆಗಳು ಮತ್ತು ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ನಾಗರಿಕ ಸಮಾಜದ ನಾಯಕರೊಬ್ಬರು ತಿಳಿಸಿದ್ದಾರೆ.

ಚರ್ಚ್ ಒಳಗೆ ಹಾಗೂ ಹೊರಗೆ 21 ಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂವರ ಸುಟ್ಟ ಮೃತದೇಹ ಪತ್ತೆಯಾಗಿದ್ದು, ಹಲವು ಮನೆಗಳನ್ನು ಸುಟ್ಟು ಹಾಕಲಾಗಿದೆ. ಆದರೆ ಹುಡುಕಾಟ ಮುಂದುವರೆದಿದೆ ಎಂದು ಕೊಮ್ನಾಡಾದ ನಾಗರಿಕ ಸಮಾಜದ ಸಂಯೋಜಕರಾದ ಡಿಯುಡೊನ್ ಡುರಾಂತಬೊ ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

error: Content is protected !!