Sunday, December 21, 2025

ಮತ್ತೊಂದು ಪರಾಕ್ರಮಕ್ಕೆ ಇಸ್ರೋ ಸಜ್ಜು: ಬ್ಲೂಬರ್ಡ್-6 ಉಪಗ್ರಹ ಉಡಾವಣೆಗೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಗನಯಾನ ಕ್ರೂ ಮಾಡ್ಯೂಲ್‌ನ ವೇಗವರ್ಧನೆ ವ್ಯವಸ್ಥೆಯ ನಿರ್ಣಾಯಕ ಹಂತವಾದ ಡ್ರೋಗ್ ಪ್ಯಾರಾಚೂಟ್‌ಗಳ ಅರ್ಹತಾ ಪರೀಕ್ಷೆಗಳ ಸರಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇಸ್ರೋ ಇದೀಗ ಮತ್ತೊಂದು ಪರಾಕ್ರಮಕ್ಕೆ ಸಜ್ಜಾಗಿದ್ದು, ಡಿಸೆಂಬರ್ 24ಕ್ಕೆ ಅತಿಭಾರದ ಬ್ಲೂಬರ್ಡ್-6 ಉಪಗ್ರಹ ಉಡಾವಣೆ ಮಾಡಲು ಸಿದ್ಧವಾಗಿದೆ.

ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಆದ ಬಾಹುಬಲಿ ಅಂತಲೂ ಕರೆಯಲ್ಪಡುವ ಎಲ್‌ವಿಎಂ3-ಎಂ6 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿ.24ರಂದು ಬೆಳಗ್ಗೆ 8:54ಕ್ಕೆ ಉಡಾವಣೆ ನಿಗದಿಯಾಗಿದೆ. ಎಲ್‌ವಿಎಂ3-ಎಂ6 ರಾಕೆಟ್ 6,500 ಕೆ.ಜಿ ತೂಕದ ಭಾರಿ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸಲಿದೆ.

ಈ ವರ್ಷದ ಇಸ್ರೋ ಕೈಗೊಂಡ ಅತ್ಯಂತ ಮಹತ್ವದ ವಾಣಿಜ್ಯ ಉಡಾವಣೆಗಳಲ್ಲಿ ಇದು ಸೇರಲಿದೆ. ನೀವು ಎಲ್ಲೇ ಇದ್ದರೂ ಮೊಬೈಲ್ ಫೋನ್‌ಗೆ ನೇರ ಇಂಟರ್‌ನೆಟ್ ಸೌಲಭ್ಯ ಸಿಗಲಿದೆ. ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ಎಂಬ ಖಾಸಗಿ ಸಂಸ್ಥೆ, ತಾನು ತಯಾರಿಸಿದ ಸ್ಮಾರ್ಟ್ಫೋನ್‌ಗಳನ್ನು ಉಪಗ್ರಹಗಳಿಗೆ ನೇರವಾಗಿ ಸಂಪರ್ಕಿಸುವ ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುವ ಭಾಗವಾಗಿ ಈ ಉಪಗ್ರಹ ರೂಪಿಸಿದೆ.

error: Content is protected !!