ಹೊಸದಿಗಂತ ವರದಿ, ವಿಜಯಪುರ:
ಕನ್ಹೇರಿ ಶ್ರೀಗಳಿಗೆ ಜಿಲ್ಲೆ ಪ್ರವೇಶ ನಿರ್ಬಂಧ ಹೇರಿದ್ದು ಸೂಕ್ತವಲ್ಲ. ಪ್ರತಿಯೊಬ್ಬರಿಗೂ ವಿಚಾರ ಭಾವನೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.
ವಿಜಯಪುರ ಜಿಲ್ಲೆಗೆ ಕನ್ಹೇರಿ ಶ್ರೀ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ನಿರ್ಬಂಧ ಹೇರಿದ್ದಾರಲ್ಲ. ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ಎಲ್ಲ ಕಡೆ ಕಾರ್ಯಕ್ರಮ ಮಾಡಿದ್ದಾರೆ. ಕನ್ಹೇರಿ ಶ್ರೀಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಮೇಲೆ ನಿರ್ಬಂಧ ಹೇರಿದ್ದು ಸರಿಯಲ್ಲ ಎಂದರು.
ಹಾಗಂತ ಕನ್ಹೇರಿ ಶ್ರೀ ಬಳಸಿದ ಭಾಷೆ ಸಮರ್ಥಿಸಿಕೊಳ್ಳಲ್ಲ. ತಮ್ಮ ಭಾಷೆ ಹಿಡಿತದಲ್ಲಿ ಕೊಟ್ಟುಕೊಂಡು ಬಳಸಬೇಕಿತ್ತು. ಅವರು ವಿಚಾರಧಾರೆ ಸರಿಯಿದೆ. ಆದರೆ ಭಾಷೆಯನ್ನು ಬಳಸುವಾಗ ಸ್ವಲ್ಪ ನಿಯಂತ್ರಣದಲ್ಲಿ ಬಳಸಬೇಕಿತ್ತು ಎಂದರು.
ಬಸವ ಸಂಸ್ಕೃತಿ ರಥಯಾತ್ರೆ ಮೂಲಕ ಮತ್ತೇ ಲಿಂಗಾಯತ ಪ್ರತ್ಯೇಕ ಧರ್ಮ ಮುನ್ನೆಲೆಗೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಲಿಂಗಾಯತ ಪ್ರತ್ಯೇಕ ಧರ್ಮ ಅನ್ನೋದು 10-20 ವರ್ಷಗಳಿಂದ ಹುಟ್ಟುಕೊಂಡಿದೆ. ಅದಕ್ಕಿಂತ ಮೊದಲು ಲಿಂಗಾಯತ ಪ್ರತ್ಯೇಕ ಧರ್ಮ ವಾದ ಎಲ್ಲಿಯೂ ಕೇಳಲು ನೋಡಲು ಸಿಕ್ಕಿಲ್ಲ ಎಂದರು.
ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಪ್ರತ್ಯೇಕ ಲಿಂಗಾಯತ ಧರ್ಮ ಹೇಳುವವರ ಶಾಲಾ ದಾಖಲಾತಿಯಲ್ಲಿ ವೀರಶೈವ ಇರೋದು ನೋಡ್ತೀವಿ. ವೀರಶೈವ ಲಿಂಗಾಯತ ಒಂದೇ ಅಂತ ವಾದ ಮಾಡುವವರ ಅನೇಕರ ಸರ್ಟಿಫಿಕೇಟ್ ನಲ್ಲಿ ಲಿಂಗಾಯತ ಎಂದಷ್ಟೇ ಇರೋದು ನೋಡ್ತೀವಿ ಎಂದರು.
ಇದರಿಂದ ಸ್ಪಷ್ಟವಾಗುವುದು ಏನೆಂದು 20 ವರ್ಷಗಳ ಹಿಂದೆ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ಭೇದಭಾವ ಕಲ್ಪನೆಯೇ ಯಾರ ತಲೆಯಲ್ಲಿ ಇರಲಿಲ್ಲ. ಇತಿಹಾಸ, ಸಾಹಿತ್ಯ ಪುರಾವೆ, ಪ್ರಮಾಣ ಬೇರೆ. ಯಾರು ತಲೆಯಲ್ಲೂ ಇರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ವಿಚಾರಕ್ಕೆ ಯಾವುದೇ ತಳಹದಿ ಇಲ್ಲ ಎಂದರು.
ಧರ್ಮದಲ್ಲಿ ಗೊಂದಲ ಇಬ್ಭಾಗ, ಬೇಧವನ್ನು ಮಾಡಬಾರದು ಎಂದು ಕರೆಕೊಟ್ಟ ಶ್ರೀಶೈಲ ಜಗದ್ಗುರು. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಎಂದು ಹೇಳಿಕೊಂಡು ಹೊರಟಿದ್ದಾರಲ್ಲ. ಆದರೆ ಬಸವಣ್ಣನವರು ಮಾಡಿರೋ ಸಮಾಜ ಸುಧಾರಣೆ ಬಗ್ಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಅವರು ಮೂಡಿಸಿದ ಕ್ರಾಂತಿ ಬಗ್ಗೆ. ನಾವು ಎಂದಿಗೂ ಕೂಡ ಬಹಳ ಗೌರವದಿಂದ ಅಭಿನಂದನಾ ದೃಷ್ಟಿಯಿಂದ ನೋಡುತ್ತೇವೆ. ಎಂದೂ ಕೂಡ ವಿರೋಧ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಆದರೆ ಬಸವಣ್ಣನವರು ತಮ್ಮ ವಚನದಲ್ಲಿ ಲಿಂಗಾಯತ ಎಂಬ ಶಬ್ದ ಬಳಸಿಲ್ಲ. ಯಾವುದೇ ವಚನ ತೆಗೆದು ನೋಡಿ ಲಿಂಗಾಯತ ಎಂಬ ಪದ ಬಳಸಿಲ್ಲ. ಆದರೆ ಒಂದು ವಚನದಲ್ಲಿ ಬಸವಣ್ಣನವರು ನಿಜವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ. ಅವರೇ ವೀರಶೈವನಾದೆ ಎಂದು ಹೇಳಿಕೊಂಡಿದ್ದಾರೆ ಅಂದ್ರೆ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಬಸವಣ್ಣನವರ ಮಾಡಿದ್ದಾರೆ ಎಂದು ಹೇಳೋದು ಎಷ್ಟು ಸೂಕ್ತ ಎಂದರು.

