ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಆಗಿರೋದು, ಮತಗಳ್ಳತನ ಆಗಿರೋದರ ಬಗ್ಗೆ ರಾಹುಲ್ ಗಾಂಧಿ ಬಳಿ ದಾಖಲಾತಿ ಇದೆ. ಆಗಸ್ಟ್ 8ರ ಪ್ರತಿಭಟನೆ ದಿನ ಅದನ್ನ ಬಿಡುಗಡೆ ಮಾಡ್ತಾರೆ ಅಂತ ಉನ್ನತ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ದೆಹಲಿ ಚುನಾವಣೆ ಸಮಯದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಚಾರಕ್ಕೆ ಹೋಗಿದ್ದೆ. ಆಗ ನಮ್ಮ ಅಭ್ಯರ್ಥಿಯೇ ನಮಗೆ ತೋರಿಸಿದ್ರು. ಒಂದೇ ಅಡ್ರೆಸ್ ನಲ್ಲಿ ಎಷ್ಟು ಜನ ಇರೋಕೆ ಸಾಧ್ಯ? ಅಲ್ಲಿ ಅಂತಹ ಅಕ್ರಮವಾಗಿದೆ. ರಾಹುಲ್ ಗಾಂಧಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅವರು 8-10 ತಿಂಗಳಿಂದ ಈ ಬಗ್ಗೆ ರಿಸರ್ಚ್ ಮಾಡಿದ್ದಾರೆ. ಈಗಾಗಿ ಅವರು ಎಲ್ಲಾ ದಾಖಲಾತಿ ಬಿಡುಗಡೆ ಮಾಡ್ತಾರೆ ಅಂತ ತಿಳಿಸಿದರು.