March 27, 2026
Friday, March 27, 2026
spot_img

ಅದಕ್ಕೆ ಹೇಳೋದು ಹೆಲ್ಮೆಟ್‌ ಹಾಕಿ ಅಂತ, ಬುಲೆಟ್‌ ರೈಡ್‌ ವೇಳೆ ಹಂಪ್ಸ್‌ನಿಂದ ರಸ್ತೆಗೆ ಬಿದ್ದು ಯುವತಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಸ್ತೆಗೆ ಯಾವ ಗಾಡಿಯಲ್ಲಾದ್ರೂ ಹೋಗಿ ತಲೆಯಲ್ಲಿ ಹೆಲ್ಮೆಟ್‌ ಇರಲಿ. ಬುಲೆಟ್‌ ಬೈಕ್‌ ಚಲಾಯಿಸುವಾಗ ಹಂಪ್ಸ್‌ ಕಾಣದೇ ಹಾರಿ ಬಿದ್ದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.

ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ ಮೃತರು. ಸ್ವಾತಿ ಎಂಬ ಯುವತಿ ಜತೆ ಬುಲೆಟ್‌ನಲ್ಲಿ ಹೋಗಿದ್ದಾರೆ.

ಸ್ವಾತಿ ಹಾಗೂ ಪ್ರಿಯಾ ಕ್ಲಾಸ್‌ಮೆಟ್ಸ್‌, ಪ್ರಿಯಾ ಗಾಡಿ ಓಡಿಸುತ್ತಿದ್ದಳು ಎನ್ನಲಾಗಿದೆ. ಸ್ವಾತಿಗೆ ಕಳೆದ ವರ್ಷವಷ್ಟೇ ಮದುವೆಯಾಗಿದೆ. ಹೆಲ್ಮೆಟ್‌ ಇಲ್ಲದೆ ಇಬ್ಬರೂ ತೆರಳಿದ್ದು, ಹಾರಿ ಬಿದ್ದಿದ್ದಾರೆ. ಪ್ರಿಯಾ ಸ್ಥಳದಲ್ಲೇ ಪ್ರಾಣಿಬಿಟ್ಟಿದ್ದಾರೆ. ಸ್ವಾತಿಯ ಆರೋಗ್ಯ ಸ್ಥಿತಿಯೂ ಗಂಭಿರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !