March 27, 2026
Friday, March 27, 2026
spot_img

ನನಗೆ ಒಳಿತಾಗಬೇಕಾದರೆ ಕೆಲ ಶಾಸಕರು ಮೌನ ಆಗಿದ್ದರೆ ಒಳಿತು: ಡಿಸಿಎಂ ಡಿ.ಕೆ. ಶಿವಕುಮಾರ್

ಹೊಸದಿಗಂತ ವರದಿ, ಕಾರವಾರ:

ನನಗೆ ಒಳಿತಾಗಬೇಕಾದರೆ ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಶಾಸಕರು ಬಾಯಿ ಮುಚ್ಚಿಕೊಂಡಿರುವುದು ಒಳಿತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರುಗಳಾದ ಇಕ್ಬಾಲ್ ಹುಸೇನ್, ರವಿ ಗಣಿಗ, ಶಿವಗಂಗಾ ಬಸವರಾಜ್ ಅವರುಗಳು ಸ್ವಲ್ಪ ಮೌನ ಆಗಿದ್ದರೆ ಸಾಕು ಎಂದರು.

ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದೇಶಕ್ಕೆ ಹೋದವರೂ ನಮ್ಮವರೇ. ಅವರೆಲ್ಲ ಬಂದ ಮೇಲೆ ಏಕೆ ಹೋಗಿದ್ದು ಎಂದು ಕೇಳುತ್ತೇನೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !