ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ವಿರುದ್ಧ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ವಿವಾದ ಸದ್ದು ಮಾಡುತ್ತಿದ್ದರೂ, ಅವರ ಸಹನಟಿ ರಚನಾ ರೈ ಇದೀಗ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ ಅನುಭವವನ್ನು ಅವರು ಸ್ಮರಿಸಿಕೊಂಡಿದ್ದಾರೆ.
ರಚನಾ ರೈ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, “ನಿಮ್ಮಂಥಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕದ್ದು ನನ್ನ ಅದೃಷ್ಟ. ಸೆಟ್‌ನಲ್ಲಿ ನಿಮ್ಮ ತಾಳ್ಮೆ, ಏಕಾಗ್ರತೆ ಮತ್ತು ಪಾತ್ರದ ಮೇಲಿನ ನಿಷ್ಠೆ ಅಚ್ಚರಿಯಾಗಿದೆ. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಮನುಷ್ಯತ್ವ ಮತ್ತು ದಯೆಯು ಎಲ್ಲರಿಗೂ ಪ್ರೇರಣೆ ನೀಡುತ್ತದೆ” ಎಂದು ಹೇಳಿದ್ದಾರೆ.
“ಬೀಚ್ ಚಿತ್ರೀಕರಣ ಸಮಯದಲ್ಲಿ ಉರಿಯುವ ಬಿಸಿಲು, ಹವಾಮಾನ ಬದಲಾವಣೆ, ಸನ್ ಬರ್ನ್ ಎಲ್ಲವು ಕಷ್ಟವಾಗಿತ್ತು. ಆದರೂ ದರ್ಶನ್ ಅವರ ಸಹನೆ, ಶ್ರಮ ಮತ್ತು ಸಿನಿಮಾದ ಮೇಲಿನ ಪ್ರೀತಿ ನೋಡಿದಾಗ ಅದು ನನಗೆ ಪಾಠವಾಯಿತು. ಅವರಂತಹ ಸಹನಟರ ಜೊತೆ ಕೆಲಸ ಮಾಡುವುದು ಗೌರವ” ಎಂದು ಹೇಳಿದ್ದಾರೆ.
ಹಾಗೆಯೇ, ನಮ್ಮ ಹಾಡನ್ನು ಜನರು ಇಷ್ಟಪಟ್ಟು ಪ್ರೀತಿ ತೋರಿಸುತ್ತಿದ್ದಾರೆ. ಆ ಪ್ರೀತಿ ನಮ್ಮನ್ನು ತಲುಪುತ್ತಿದೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ರಚನಾ ರೈ ಬರೆದಿದ್ದಾರೆ.