April 7, 2026
Tuesday, April 7, 2026
spot_img

ಜಾತಿಗಣತಿ ಆರಂಭವಾಗಿ ನಾಲ್ಕು ದಿನ! ಈವರೆಗೂ ಆಗಿರುವ ಸರ್ವೆ ಎಷ್ಟು??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾತಿಗಣತಿ ಸಮೀಕ್ಷೆ ಆರಂಭವಾಗಿ ಇಂದಿಗೆ 4 ದಿನಗಳು ಕಳೆದಿವೆ. ಸರ್ವರ್‌ ಸಮಸ್ಯೆ, ನೆಟ್‌ವರ್ಕ್‌ ಇಶ್ಯೂಗಳ ಮಧ್ಯೆ ಸಮೀಕ್ಷೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೂ ಎಷ್ಟು ಜನರ ಸಮೀಕ್ಷೆ ಆಗಿದೆ? ಇಲ್ಲಿದೆ ಡೀಟೇಲ್ಸ್‌..

ಇದುವರೆಗೂ 2,62,626 ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದೆ ಎಂದು ಹೇಳಲಾಗಿದೆ. ಒಂದು ದಿನದ ಸಮೀಕ್ಷೆಗೆ ಟಾರ್ಗೆಟ್ 11.87 ಲಕ್ಷ ಮನೆಗಳ ಟಾರ್ಗೆಟ್ ನೀಡಲಾಗಿತ್ತು. ಅದರಂತೆ ಸಮೀಕ್ಷೆಯ ಟಾರ್ಗೆಟ್ ರೀಚ್ ಆಗಿಲ್ಲ. ಇನ್ನೂ ಸೆ.25 ರಂದು ರಾಜ್ಯಾದ್ಯಂತ 79,804 ಮನೆಗಳ ಸಮೀಕ್ಷೆ ನಡೆದಿದೆ. 

19 ಜಿಲ್ಲೆಗಳ 526 ಬ್ಲಾಕ್‍ಗಳಲ್ಲಿ ಸಮೀಕ್ಷೆಗೆ ಇನ್ನೂ ಸಿಬ್ಬಂದಿ ನಿಯೋಜನೆ ಮಾಡಲಾಗಿಲ್ಲ. ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ.

ಅಕ್ಟೋಬರ್ 7ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಜಾತಿ ಗಣತಿಗೆ ಹಿಂದುಳಿದ ವರ್ಗಗಳ ಆಯೋಗ 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಿದ್ದು, ಗಣತಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಗಣತಿ ಕಾರ್ಯವನ್ನು ಯಾವ ರೀತಿ ನಡೆಸಬೇಕು, ಯಾವೆಲ್ಲಾ ಮಾಹಿತಿಗಳನ್ನು ಸಂಗ್ರಹಿಸಬೇಕು ಎಂಬ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !