March 13, 2026
Friday, March 13, 2026
spot_img

ಈ 5 ಸಂದರ್ಭದಲ್ಲಿ ಮಾತಾಡೋದಕ್ಕಿಂತ ಬಾಯಿಮುಚ್ಕೊಂಡು ಇರೋದು ಬೆಟರ್ ಅಂತೆ! ನೀವೇನ್ ಹೇಳ್ತೀರಾ?

ಪ್ರತಿ ಸಂದರ್ಭದಲ್ಲೂ ಪ್ರತಿಕ್ರಿಯೆ ಮಾತಾಡ್ಲೇಬೇಕು ಅನ್ನೋ ಅನಿವಾರ್ಯ ಇಲ್ಲ. ಕೆಲವೊಮ್ಮೆ ನಾವು ಮಾತನಾಡುವ ಒಂದು ಮಾತು ಸಂಬಂಧಗಳನ್ನು ಹಾಳು ಮಾಡಬಹುದು, ಮನಸ್ಸಿಗೆ ನೋವುಂಟುಮಾಡಬಹುದು. ಅಂಥ ಸಮಯದಲ್ಲಿ ಮೌನವೇ ದೊಡ್ಡ ಉತ್ತರವಾಗುತ್ತದೆ. ಬದುಕಿನಲ್ಲಿ ಕೆಲವು ಸಂದರ್ಭಗಳಲ್ಲಿ ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ.

  • ಆವೇಶದಲ್ಲಿ ಹೇಳಿದ ಮಾತು ಹಿಂತಿರುಗಿಸಿಕೊಳ್ಳಲು ಸಾಧ್ಯವಿಲ್ಲ. ಕ್ಷಣಿಕ ಕೋಪ ಶಮನವಾದ ಮೇಲೆ ಪಶ್ಚಾತ್ತಾಪ ಆಗಬಹುದು. ಅಂಥ ಸಮಯದಲ್ಲಿ ಸ್ವಲ್ಪ ಮೌನವಾಗಿರುವುದು ಉತ್ತಮ.
  • ಕೆಲವರು ಜಗಳಕ್ಕೆ ಕಾರಣ ಹುಡುಕುತ್ತಾರೆ. ಪ್ರತಿಕ್ರಿಯೆ ನೀಡಿದರೆ ವಿಷಯ ಮತ್ತಷ್ಟು ಹೆಚ್ಚುತ್ತದೆ. ಮೌನವೇ ಅವರ ಪ್ರಯತ್ನವನ್ನು ವಿಫಲಗೊಳಿಸುತ್ತದೆ.
  • ಎಲ್ಲ ವಿಚಾರ ತಿಳಿಯದೆ ಅಭಿಪ್ರಾಯ ಹೇಳುವುದು ತಪ್ಪು ಕಲ್ಪನೆ ಹುಟ್ಟಿಸಬಹುದು. ಮೊದಲು ಕೇಳಿ, ಅರ್ಥಮಾಡಿಕೊಂಡು ನಂತರ ಮಾತಾಡುವುದು ಸೂಕ್ತ.
  • ಪ್ರತಿ ಟೀಕೆಗೆ ಉತ್ತರ ಕೊಡುವ ಅಗತ್ಯವಿಲ್ಲ. ಮೌನ ಕೆಲವೊಮ್ಮೆ ನಮ್ಮ ಆತ್ಮಗೌರವವನ್ನು ಕಾಪಾಡುತ್ತದೆ.
  • ದುಃಖದ ಕ್ಷಣದಲ್ಲಿ ಮಾತುಗಳು ಸರಿಯಾಗಿ ಹೊರಬರುವುದಿಲ್ಲ. ಸ್ವಲ್ಪ ಸಮಯ ಕೊಟ್ಟು ಮನಸ್ಸು ಸಮತೋಲನಕ್ಕೆ ಬಂದ ಬಳಿಕ ಮಾತನಾಡುವುದು ಉತ್ತಮ.
  • ಮೌನ ದುರ್ಬಲತೆ ಅಲ್ಲ. ಅದು ಸಂಯಮದ ಸಂಕೇತ. ಸರಿಯಾದ ಸಂದರ್ಭದಲ್ಲಿ ಮೌನ ಆಯ್ಕೆ ಮಾಡಿದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ತಪ್ಪಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !