ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಇತ್ತೀಚೆಗೆ ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಭಾಗವಹಿಸಿದ್ದಾಗಿನಿಂದ ಭಾರೀ ಚರ್ಚೆಗಳು ಆಗುತ್ತಿದ್ದು, ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರದ ಈ ಬೆಳವಣಿಗೆ ಸಿನಿಮಾರಂಗದಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಇದೀಗ ನಟ, ನಿರ್ದೇಶಕ ಪಾರ್ತಿಬನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಬಹಿರಂಗ ವೇದಿಕೆಯಲ್ಲೇ ತ್ರಿಶಾ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪಾರ್ತಿಬನ್ ಅವರಿಗೆ ತ್ರಿಶಾ ಬಗ್ಗೆ ‘ನಿಮ್ಮ ಕುಂಡವೈ ಕುರಿತು ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದಾಗ, ಈ ಕುಂಡವೈಯನ್ನು ಕೆಲವು ದಿನಗಳವರೆಗೆ ಮನೆಯಲ್ಲಿ ಇಡಬೇಕು. ಅದು ಒಳ್ಳೆಯದು. ಅವರನ್ನು ಹೊರಗೆ ಬರಲು ಬಿಡಬೇಡಿ’ಎಂದು ವ್ಯಂಗ್ಯವಾಡಿದ್ದಾರೆ.
ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಗಳಲ್ಲಿ, ತ್ರಿಶಾ ಕುಂಡವೈ ಪಾತ್ರವನ್ನು ನಿರ್ವಹಿಸಿದರೆ, ಪಾರ್ತಿಬನ್ ಎರಡನೇ ಚಿತ್ರದಲ್ಲಿ ಚಿನ್ನ ಪಜುವೆಟ್ಟರಾಯರ್ ಪಾತ್ರವನ್ನು ನಿರ್ವಹಿಸಿದ್ದರು.
ಇದರ ಬೆನ್ನಲ್ಲೇ ಟ್ವೀಟ್‌ನಲ್ಲಿ ನಟಿ ತ್ರೀಗೇಟು ನೀಡಿದ್ದು, ಇತ್ತೀಚಿನ ಕಾರ್ಯಕ್ರಮವೊಂದರ ಆಯೋಜಕರು ನನಗೆ ತಿಳಿಸಿದ್ದು, ಒಬ್ಬ ವ್ಯಕ್ತಿಯು ತನ್ನ ಸಹಾಯಕನ ಮೂಲಕ ತಿಳಿಸಿದ ಕೋರಿಕೆಯ ಮೇರೆಗೆ ಕೊನೆಯ ಕ್ಷಣದಲ್ಲಿ ನನ್ನ ಹೆಸರು ಮತ್ತು ಚಿತ್ರವನ್ನು ವಿಡಿಯೋ ಪ್ಲೇ ಮಾಡಿಸಿದ್ದಾರೆ. ಮೈಕ್ರೋಫೋನ್ ಕಾಮೆಂಟ್ ಅನ್ನು ಬುದ್ಧಿವಂತ ಅಥವಾ ಹಾಸ್ಯಮಯವಾಗಿಸುವುದಿಲ್ಲ. ಅದು ಮೂರ್ಖತನವನ್ನು ಪ್ರದರ್ಶಿಸುತ್ತದೆ. ಜ್ಞಾನವಿಲ್ಲದ ಒರಟು ಪದಗಳು ಅವರು ಉದ್ದೇಶಿಸಿರುವ ವ್ಯಕ್ತಿಯ ಬಗ್ಗೆ ಹೆಚ್ಚು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ.



