ಹೊಸದಿಗಂತ ಬೆಳಗಾವಿ:
ಮದುವೆಯಾಗಲು ಹುಡುಗಿ ಸಿಗದ ಕಾರಣಕ್ಕೆ ಮನನೊಂದ ಬೆಳಗಾವಿ ಹಿಂಡಲಗಾ ಕಾರಾಗೃಹದ ವಾರ್ಡರ್ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನೋದ ಭೀಮಪ್ಪ ತಿಗಡಿ (31) ಮೃತ ದುರ್ದೈವಿ. ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ನಿವಾಸಿಯಾಗಿದ್ದ ವಿನೋದ್, ಇತ್ತೀಚೆಗಷ್ಟೇ ಹೊಸ ಮನೆಯನ್ನು ನಿರ್ಮಿಸಿದ್ದರು. ಸರ್ಕಾರಿ ಉದ್ಯೋಗದಲ್ಲಿದ್ದರೂ ಎಷ್ಟೇ ಹುಡುಕಿದರೂ ಮದುವೆಗೆ ವಧು ಸಿಗದ ಕಾರಣ ತೀವ್ರ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಬುಧವಾರ ನದಿಗೆ ಹಾರಿ ಜೀವನ ಅಂತ್ಯಗೊಳಿಸಿದ್ದು, ಚೆನ್ನಮ್ಮ ಕಿತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



