Wednesday, December 24, 2025

ಪ್ರಧಾನಿ ಮೋದಿ ಭೇಟಿಯಾದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಂಪತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಈ ವರ್ಷದ ಆರಂಭದಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಮೋರ್ ಅವರನ್ನು ವಿವಾಹವಾದ ಚೋಪ್ರಾ, ಪ್ರಸ್ತುತ ಸ್ಪರ್ಧೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.

‘ಇಂದು ಬೆಳಗ್ಗೆ ಲೋಕ ಕಲ್ಯಾಣ್ ಮಾರ್ಗ್‌ದಲ್ಲಿರುವ ತಮ್ಮ ನಿವಾಸಕ್ಕೆ ನೀರಜ್ ಚೋಪ್ರಾ ಮತ್ತು ಅವರ ಪತ್ನಿ ಹಿಮಾನಿ ಮೋರ್ ಅವರು ಆಗಮಿಸಿದ್ದರು. ಈ ವೇಳೆ ಕ್ರೀಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ನಾವು ಉತ್ತಮ ಸಂವಾದ ನಡೆಸಿದೆವು’ ಎಂದು ಪ್ರಧಾನಿ ಮೋದಿ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

2021ರಲ್ಲಿ ಟೋಕಿಯೊದಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರು ಇತಿಹಾಸ ಸೃಷ್ಟಿಸಿದ್ದರು. ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೆಟಿಕ್ಸ್ ಎಂಬ ಗೌರವಕ್ಕೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.

error: Content is protected !!