ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಭಯೋತ್ಪಾದಕರನ್ನು ಹೊಡೆದುರುಳಿಸುವ ಸಲುವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ.
ಇತ್ತ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ತಿಂಗಳುಗಳ ನಂತರ, ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಜೈಶ್ ಉನ್ನತ ಕಮಾಂಡರ್ ಮಸೂದ್ ಅಜರ್ ಕುಟುಂಬ ಸಾವನ್ನಪ್ಪಿದೆ ಎಂದು ಆತನೇ ಸ್ವತಃ ಹೇಳಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಜೆಇಎಂ ಕಮಾಂಡರ್ ಮಸೂದ್, ಭಾರತೀಯ ಸೇನೆ ತಮ್ಮ ಅಡಗುತಾಣಕ್ಕೆ ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದನ್ನು ವಿವರಿದ್ದಾನೆ.
https://x.com/OsintTV/status/1967795074974294029?ref_src=twsrc%5Etfw%7Ctwcamp%5Etweetembed%7Ctwterm%5E1967795074974294029%7Ctwgr%5E117a0c722686224f17ad250f65f3f7886a092efd%7Ctwcon%5Es1_&ref_url=https%3A%2F%2Fvishwavani.news%2F%2Fforeign%2Fvideo-masood-azhars-family-torn-apart-in-op-sindoor-jaish-commander-admits-55053.html
ಭಯೋತ್ಪಾದನೆಯನ್ನು ಸ್ವೀಕರಿಸಿ, ಈ ದೇಶದ ಗಡಿಗಳನ್ನು ರಕ್ಷಿಸುವುದಕ್ಕಾಗಿ ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್ ವಿರುದ್ಧ ಹೋರಾಡಿದೆವು. ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು, ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಮೌಲಾನಾ ಮಸೂದ್ ಅಜರ್ ಕುಟುಂಬವನ್ನು ನಾಶ ಮಾಡಲಾಯಿತು ಎಂದು ಉಗ್ರನೊಬ್ಬ ಹೇಳಿದ್ದಾನೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ವಾರಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರು ಹಾಗೂ ಭಯೋತ್ಪಾದಕ ನೆಲೆಗಳ ಮೇಲೆ ದಾಳಿಗಳನ್ನು ನಡೆಸಿದವು. ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಆಳವಾದ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡವು. ಬಹಾವಲ್ಪುರ್, ಕೋಟ್ಲಿ ಮತ್ತು ಮುರಿಡ್ಕೆಯಲ್ಲಿನ ಸ್ಥಳಗಳು ಸೇರಿದಂತೆ ಒಂಬತ್ತು ಸ್ಥಳಗಳು ದಾಳಿಯಲ್ಲಿ ಹಾನಿಗೊಳಗಾದವು ಎಂದು ಪಾಕಿಸ್ತಾನ ನಂತರ ಒಪ್ಪಿಕೊಂಡಿತು ಇವೆಲ್ಲವೂ ಉಗ್ರಗಾಮಿ ಚಟುವಟಿಕೆಯ ಕೇಂದ್ರಗಳಾಗಿವೆ.