April 4, 2026
Saturday, April 4, 2026
spot_img

Juice | ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್ ಕುಡಿಯಿರಿ ದೇಹ ತಂಪು ಮಾಡ್ಕೊಳಿ

ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡೋ ಸಾಂಪ್ರದಾಯಿಕ ಪಾನೀಯ ಅಂದ್ರೆ ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್. ಎಳ್ಳಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನ ಹಾಲಿನ ರುಚಿ ಸೇರಿ ಈ ಜ್ಯೂಸ್ ತುಂಬಾ ಟೇಸ್ಟಿ ಆಗಿರುತ್ತದೆ.

ಬೇಕಾಗುವ ಪದಾರ್ಥಗಳು

ಕಪ್ಪು ಅಥವಾ ಬಿಳಿ ಎಳ್ಳು – 4 ಟೇಬಲ್ ಸ್ಪೂನ್
ತಾಜಾ ತೆಂಗಿನ ತುರಿ – 1/2 ಕಪ್
ಬೆಲ್ಲ – 3 ರಿಂದ 4 ಟೇಬಲ್ ಸ್ಪೂನ್
ಏಲಕ್ಕಿ ಪುಡಿ – 1/4 ಟೀ ಸ್ಪೂನ್
ತಣ್ಣೀರು ಅಥವಾ ಚಿಲ್ಲ್ಡ್ ಹಾಲು – 2 ಕಪ್
ಐಸ್ ಕ್ಯೂಬ್ಸ್ – ಬೇಕಾದಷ್ಟು
ನೆನೆಸಿದ ಬಾದಾಮಿ ಅಥವಾ ಗೋಡಂಬಿ – 4 ರಿಂದ 5

ಮಾಡುವ ವಿಧಾನ

ಮೊದಲು ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ. ಎಳ್ಳು ಸುಗಂಧ ಬರುವವರೆಗೆ ಮಾತ್ರ ಹುರಿದರೆ ಸಾಕು, ಹೆಚ್ಚು ಬೇಡ.

ಅದನ್ನು ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿ. ಜೊತೆಗೆ ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ಉಳಿದ ನೀರು ಅಥವಾ ಹಾಲು ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ಬೇಕಾದರೆ ಜ್ಯೂಸ್ ಅನ್ನು ಜರಡಿ ಮೂಲಕ ಸೋಸಿ ಸ್ಮೂತ್ ಆಗಿ ತೆಗೆದುಕೊಳ್ಳಬಹುದು.

ಕೊನೆಯಲ್ಲಿ ಐಸ್ ಕ್ಯೂಬ್ಸ್ ಹಾಕಿ ಗ್ಲಾಸ್‌ಗೆ ಸರ್ವ್ ಮಾಡಿ.

ಸಣ್ಣ ಟಿಪ್

ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಎಳ್ಳಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಐರನ್ ದೇಹಕ್ಕೆ ಒಳ್ಳೆಯದು. ಮಂಗಳೂರು ಮನೆಗಳಲ್ಲಿ ಇದು ತುಂಬಾ ಫೇಮಸ್ ಡ್ರಿಂಕ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !