ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಸ್ಟೋರೆಂಟ್ ಒಂದರಲ್ಲಿ ಕೆಲಸಮಾಡುತ್ತಿದ್ದ ಸಿಬ್ಬಂದಿ ಅಡುಗೆ ಮಾಡುವಾಗ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ಘಟನೆ ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಈ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ವೀಡಿಯೋ ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.
ಗಾಜಿಯಾಬಾದ್‌ನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬ ತಂದೂರಿ ರೊಟ್ಟಿಗಳನ್ನು ತಯಾರಿಸುವಾಗ ಅದರ ಮೇಲೆ ಉಗುಳುತ್ತಿದ್ದದ್ದು ವಿಡಿಯೋವೊಂದರಲ್ಲಿ ರೆಕಾರ್ಡ್ ಆಗಿದೆ. ಇದೇ ರೆಸ್ಟೋರೆಂಟ್ ಗೆ ಬಂದ ಗ್ರಾಹಕ ನೊಬ್ಬನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ವಿಡಿಯೋ ಮಾಡಿದ್ದಾನೆ.
ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ರೆಸ್ಟೋರೆಂಟ್, ಹೊಟೇಲ್ ಇತರ ಸ್ಥಳಗಳ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಹೊಸ ಪ್ರಶ್ನೆ ಹುಟ್ಟುಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ಸಂಬಂಧ ಪಟ್ಟ ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ದೂರುಗಳು ಕೇಳಿ ಬರುತ್ತಲೇ ಇದೆ.
ಸುಮ್ಮನೆ ರೊಟ್ಟಿ ತಟ್ಟೋಕಾಗಲ್ವಾ? ಕಸ್ಟಮರ್ ನೋಡದಾಗ ಊಟಕ್ಕೆ ಉಗಿದ ಸಿಬ್ಬಂದಿ!

