Tuesday, November 25, 2025

ನ.24ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟೀಸ್‌ ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನ.24ರಂದು ಸುಪ್ರೀಂಕೋರ್ಟ್ 53ನೇ ಸಿಜೆಐ (CJI) ಆಗಿ ನ್ಯಾ.ಸೂರ್ಯಕಾಂತ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಸಿಜೆಐಯಾಗಿರುವ ಗವಾಯಿ ಅವರ ಅಧಿಕಾರಾವಧಿಯು ಇದೇ ನವೆಂಬರ್ 23ರಂದು ಕೊನೆಗೊಳ್ಳಲಿದೆ. ಬಳಿಕ ನ್ಯಾ.ಸೂರ್ಯಕಾಂತ್ ಅವರು 2027ರ ಫೆ.9ರವರೆಗೆ ಸೇವೆ ಸಲ್ಲಿಸಲಿದ್ದು, 14 ತಿಂಗಳು ಅಧಿಕಾರದಲ್ಲಿರಲಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಭೂತಾನ್, ಕೀನ್ಯಾ, ಮಾರಿಷಿಯಸ್, ನೇಪಾಳ, ಶ್ರೀಲಂಕಾ, ಬ್ರೆಜಿಲ್ ಸೇರಿದಂತೆ 7 ದೇಶಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಭಾಗವಹಿಸಲಿದ್ದಾರೆ.

ಇನ್ನೂ ನ್ಯಾ. ಸೂರ್ಯಕಾಂತ್ ಅವರ ಕುಟುಂಬಸ್ಥರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅವರ ಸಹೋದರರಾದ ರಿಷಿಕಾಂತ್, ಶಿವಕಾಂತ್ ಮತ್ತು ದೇವಕಾಂತ್ ಅವರು ತಮ್ಮ ಕುಟುಂಬಗಳೊಂದಿಗೆ ಭಾಗಿಯಾಗಲಿದ್ದು, ಪ್ರಮಾಣವಚನಕ್ಕೂ ಒಂದು ದಿನ ಮೊದಲು ದೆಹಲಿಗೆ ತೆರಳಿ, ಬಳಿಕ ಹರಿಯಾಣ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

error: Content is protected !!