April 11, 2026
Saturday, April 11, 2026
spot_img

‘ಜನ ನಾಯಗನ್’ ಲೀಕ್ ಆಗಿದ್ದಕ್ಕೆ ಕಾರಣ ಹೇಳಿದ ಕಮಲ್ ಹಾಸನ್: ಯಾರು ಹೊಣೆ ಅಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಬಿಡುಗಡೆ ಆದ ಬಳಿಕ ಪೈರಸಿ ಕಾಟ ಹೊಸದೇನಲ್ಲ. ಆದರೆ ಈ ಬಾರಿ ಚಿತ್ರಮಂದಿರಕ್ಕೆ ಬರೋದಕ್ಕೂ ಮುನ್ನವೇ ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರದ ದೃಶ್ಯಗಳು ಸೋರಿಕೆಯಾಗಿರುವುದು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಬೆಳವಣಿಗೆಗೆ ನಟ ಕಮಲ್ ಹಾಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೆನ್ಸಾರ್ ಪ್ರಕ್ರಿಯೆಯ ವಿಳಂಬವೇ ಇದಕ್ಕೆ ಮೂಲ ಕಾರಣ ಎಂದು ಆರೋಪಿಸಿದ್ದಾರೆ.

ಕೆವಿಎನ್ ಸಂಸ್ಥೆ ನಿರ್ಮಾಣದ ಈ ಚಿತ್ರವು ಆರಂಭದಲ್ಲಿ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದೇ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿತು. ಕೆಲವು ದೃಶ್ಯಗಳು ಮತ್ತು ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಂಡಳಿ, ಚಿತ್ರವನ್ನು ಮುಂಬೈನ ಪುನರ್ ಪರಿಶೀಲನಾ ಸಮಿತಿಗೆ ಕಳುಹಿಸಲು ಸೂಚಿಸಿತ್ತು.

ಇದನ್ನೂ ಓದಿ:

ಈ ವಿಚಾರವಾಗಿ ಸಿನಿಮಾ ತಂಡ ಮೊದಲು ನ್ಯಾಯಾಲಯದ ಮೊರೆ ಹೋಗಿದ್ದರೂ, ವಿಚಾರಣೆ ದೀರ್ಘವಾಗುತ್ತಿದ್ದಂತೆ ನಂತರ ಪ್ರಕರಣವನ್ನು ಹಿಂಪಡೆದು ಮರುಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿದೆ. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವುದು ದೊಡ್ಡ ಶಾಕ್ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಇದು ಅಚಾನಕ್ ಆಗಿ ನಡೆದ ಲೀಕ್ ಅಲ್ಲ. ವ್ಯವಸ್ಥೆಯ ವೈಫಲ್ಯದಿಂದಲೇ ಇಂತಹ ಘಟನೆ ಸಂಭವಿಸಿದೆ. ಕಾನೂನು ಪ್ರಕ್ರಿಯೆ ಸಮಯಕ್ಕೆ ನಡೆಯದೇ ಇದ್ದಾಗ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಸಿಗುತ್ತದೆ, ಎಂದು ಕಿಡಿಕಾರಿದ್ದಾರೆ.

ಈ ಹೇಳಿಕೆ ಇದೀಗ ಸೆನ್ಸಾರ್ ಮಂಡಳಿ ಕಾರ್ಯವೈಖರಿಯ ಮೇಲೂ ಪ್ರಶ್ನೆಗಳನ್ನು ಎಬ್ಬಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !